Thursday, June 4, 2026
Homeಚಿಕ್ಕಮಗಳೂರುಚಿಕ್ಕಮಗಳೂರು: ಹಳ್ಳದಲ್ಲಿ ಕೊಚ್ಚಿ ಹೋಗಿ 14 ದಿನಗಳ ಬಳಿಕ ಪ್ರತ್ಯಕ್ಷವಾದ ವ್ಯಕ್ತಿ!

ಚಿಕ್ಕಮಗಳೂರು: ಹಳ್ಳದಲ್ಲಿ ಕೊಚ್ಚಿ ಹೋಗಿ 14 ದಿನಗಳ ಬಳಿಕ ಪ್ರತ್ಯಕ್ಷವಾದ ವ್ಯಕ್ತಿ!

- Advertisement -
- Advertisement -

ಚಿಕ್ಕಮಗಳೂರು: ಭಾರೀ ಮಳೆಗೆ
ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿಯೊಬ್ಬರು ಹದಿನಾಲ್ಕು ದಿನಗಳ ಬಳಿಕ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.

ಚಿಕ್ಕಮಗಳೂರು ನಗರದ ಐಜಿ ರಸ್ತೆಯಲ್ಲಿ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಸುರೇಶ್ ಎಂಬ ವ್ಯಕ್ತಿ ಕಾಣಿಸಿಕೊಂಡಿದ್ದು, ಕೊಚ್ಚಿ ಹೋಗಿದ್ದ ವ್ಯಕ್ತಿ ಬದುಕಿ ಬಂದಿದ್ದನ್ನು ಕಂಡು ಜನರು ದಂಗಾಗಿದ್ದಾರೆ‌.

ಜುಲೈ 12ರಂದು ಹಳ್ಳ ದಾಟುವಾಗ ಕೊಚ್ಚಿ ಹೋಗಿದ್ದ ಸುರೇಶ್, ಬಳಿಕ ಹಳ್ಳದಿಂದ ಎದ್ದು ನಾಪತ್ತೆಯಾಗಿದ್ದರು.

ಸುರೇಶ್ ಪತ್ನಿ ನೀಡಿದ್ದ ಮಾಹಿತಿಯಂತೆ ಒಂದು ವಾರಗಳ ಕಾಲ ಸುರೇಶ್ ಗಾಗಿ ಹುಡುಕಾಟ ನಡೆಸಲಾಗಿತ್ತು. ಎಸ್ ಡಿ ಆರ್ ಎಫ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು. ಸತತ ಕಾರ್ಯಾಚರಣೆ ನಡೆಸಿ ಸುಸ್ತಾಗಿದ್ದರು.

ಇದೀಗ 14 ದಿನಗಳ ಬಳಿಕ ಚಿಕ್ಕಮಗಳೂರು ನಗರದಲ್ಲಿ ಸುರೇಶ್ ಪ್ರತ್ಯಕ್ಷರಾಗಿದ್ದಾರೆ.

- Advertisement -

Latest News

error: Content is protected !!