Sunday, June 7, 2026
Homeಕರಾವಳಿಉಡುಪಿಉಡುಪಿ: ವೈನ್ ಶಾಪ್ ಬಳಿಯೇ ಕುಸಿದು ಬಿದ್ದು, ವ್ಯಕ್ತಿ ಸಾವು

ಉಡುಪಿ: ವೈನ್ ಶಾಪ್ ಬಳಿಯೇ ಕುಸಿದು ಬಿದ್ದು, ವ್ಯಕ್ತಿ ಸಾವು

- Advertisement -
- Advertisement -

ಉಡುಪಿ: ವಿಪರೀಪ ಮದ್ಯಸೇವನೆಯ ಚಟ ಹೊಂದಿದ್ದ ವ್ಯಕ್ತಿಯೊಬ್ಬರು ವೈನ್ ಶಾಪ್ ಬಳಿಯೇ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಕುಂದಾಪುರದ ಕಾವ್ರಾಡಿ ಗ್ರಾಮದ ಕಂಡ್ಲೂರು ಗಂಗಾ ವೈನ್ಸ್ ಶಾಪ್ ಬಳಿ ನಡೆದಿದೆ.

ಗುಲ್ವಾಡಿ ಗ್ರಾಮದ 60 ವರ್ಷದ ಕುಷ್ಠ ಪೂಜಾರಿ ಮೃತ ದುರ್ದೈವಿ. ಇವರು ವಿಪರೀತ ಮದ್ಯಪಾನ ಚಟವನ್ನು ಹೊಂದಿದ್ದು, ಇದರಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು.

ಗಂಗಾ ವೈನ್ ಶಾಪ್ ಬಳಿ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!