Friday, June 5, 2026
Homeಕರಾವಳಿಉಡುಪಿಉಡುಪಿ: ಸ್ಕೂಟರ್ ಗೆ ಬುಲೆಟ್ ಡಿಕ್ಕಿ‌, ಸವಾರ ಸಾವು

ಉಡುಪಿ: ಸ್ಕೂಟರ್ ಗೆ ಬುಲೆಟ್ ಡಿಕ್ಕಿ‌, ಸವಾರ ಸಾವು

- Advertisement -
- Advertisement -

ಉಡುಪಿ: ಸ್ಕೂಟರ್ ಗೆ ಬುಲೆಟ್ ಡಿಕ್ಕಿ‌, ಸವಾರ ಸಾವನ್ನಪ್ಪಿರುವ ಘಟನೆ ಕುಂದಾಪುರ ತಾಲೂಕಿನ ಸಿದ್ದಾಪುರ ಕೋಟೆಬೆಟ್ಟು ಕ್ರಾಸ್‌ ಬಳಿ ನಡೆದಿದೆ.

ಮೃತ ಸ್ಕೂಟರ್ ಸವಾರನನ್ನು ಕೆ.ಭಾಸ್ಕರ ಶೆಟ್ಟಿ ಎಂದು ಗುರುತಿಸಲಾಗಿದೆ. ಇವರು ಕೋಟೆಬೆಟ್ಟು ಕ್ರಾಸ್‌ನಿಂದ ಸಿದ್ದಾಪುರ ಕಡೆಗೆ ಸ್ಕೂಟರ್ ನಲ್ಲಿ  ಹೋಗುತ್ತಿದ್ದರು. ಈ ವೇಳೆ ಸಿದ್ದಾಪುರ ಕಡೆಯಿಂದ ಅಂಪಾರು ಕಡೆಗೆ ಬರುತ್ತಿದ್ದ ಬುಲೆಟ್ ಸವಾರ ಅರವಿಂದ ಯಡಿಯಾಳ ಎಂಬಾತ ಅತೀ ವೇಗದಿಂದ ಬಂದು ಸ್ಕೂಟರ್ ಗೆ ಡಿಕ್ಕಿ ಹೊಡೆದಿದ್ದಾನೆ.

ಇದರ ಪರಿಣಾಮ ಸ್ಕೂಟರ್ ಸಮೇತ ಭಾಸ್ಕರ್ ಶೆಟ್ಟಿ ರಸ್ತೆ ಬಿದ್ದು, ಗಂಭೀರ ಗಾಯಗೊಂಡಿದ್ದರು. ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!