Wednesday, June 3, 2026
Homeತಾಜಾ ಸುದ್ದಿವೈದ್ಯಕೀಯ ಶಿಕ್ಷಣ ಸಚಿವರಾದ ಡಾ| ಕೆ.ಸುಧಾಕರ್ ಕಾರಿನ ಬಳಿಗೆ ಚಾಕು ಇಟ್ಟುಕೊಂಡು ಬಂದ ಯುವಕ ಅರೆಸ್ಟ್

ವೈದ್ಯಕೀಯ ಶಿಕ್ಷಣ ಸಚಿವರಾದ ಡಾ| ಕೆ.ಸುಧಾಕರ್ ಕಾರಿನ ಬಳಿಗೆ ಚಾಕು ಇಟ್ಟುಕೊಂಡು ಬಂದ ಯುವಕ ಅರೆಸ್ಟ್

- Advertisement -
- Advertisement -

ಚಿಕ್ಕಬಳ್ಳಾಪುರ : ವೈದ್ಯಕೀಯ ಶಿಕ್ಷಣ ಸಚಿವರಾದ ಡಾ| ಕೆ.ಸುಧಾಕರ್ ಕಾರಿನ ಬಳಿಗೆ ಚಾಕು ಇಟ್ಟುಕೊಂಡು ಬಂದ ಯುವಕನನ್ನ ಪೊಲೀಸರು ವಶಕ್ಕೆ ಪಡೆದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಂಡಿಬಂಡೆ ತಾಲೂಕಿನ ಬೀಚಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಇಂಧನ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಉಜ್ವಲ ಭಾರತ, ಉಜ್ವಲ ಭವಿಷ್ಯ ಕಾರ್ಯಕ್ರಮ ಮುಗಿಸಿ ಸಚಿವರು ವಾಪಸ್ ಕಾರಿನಲ್ಲಿ ಹೋಗುತ್ತಿದ್ದ ವೇಳೆ ಬೀಚಗಾನಹಳ್ಳಿ ಗ್ರಾಮದ ಯುವಕ ಗಂಗಪ್ಪ ಎಂಬುವನು ಚಾಕು ಇಟ್ಟುಕೊಂಡು ಕಾರಿನ ಬಳಿಗೆ ಹೋಗಿದ್ದು, ಅಲ್ಲಿಯೇ ಇದ್ದ ಪೊಲೀಸ್ ಪೇದೆ ಕರಿಬಾಬು ಅತನ ಅನುಮಾನಾಸ್ಪದ ವರ್ತನೆಯನ್ನು ಗಮನಿಸಿ ತಡೆದಿದ್ದಾರೆ.

ಅತನ ಬಳಿ ಚಾಕು ಇರುವುದನ್ನು ಗಮನಿಸಿ ತಕ್ಷಣ ಅಲ್ಲಿಂದ ಹೊರದಬ್ಬಿ ಇತರ ಪೊಲೀಸರ ಸಹಾಯದಿಂದ ಮುಂದೆ ಆಗಬಹುದಿದ್ದ ಅನಾಹುತವನ್ನು ತಪ್ಪಿಸಿದ್ದಾರೆ. ಹೆಚ್ಚಿನ ವಿಚಾರಣೆಗೆ ಪೊಲೀಸರು ಆತನನ್ನು ಕರೆದೊಯ್ದಿದ್ದು, ಸತ್ಯಾಂಶ ವಿಚಾರಣೆ ನಂತರವೇ ಹೊರಬರಬೇಕಾಗಿದೆ.

- Advertisement -

Latest News

error: Content is protected !!