Monday, April 29, 2024
Homeತಾಜಾ ಸುದ್ದಿಶಿರಾಡಿ ಘಾಟ್ ನಲ್ಲಿ ಲಘು ವಾಹನ ಸಂಚಾರಕ್ಕೆ ಅವಕಾಶ: ಹಾಸನ ಜಿಲ್ಲಾಧಿಕಾರಿ ಆರ್.ಗಿರೀಶ್ ಆದೇಶ

ಶಿರಾಡಿ ಘಾಟ್ ನಲ್ಲಿ ಲಘು ವಾಹನ ಸಂಚಾರಕ್ಕೆ ಅವಕಾಶ: ಹಾಸನ ಜಿಲ್ಲಾಧಿಕಾರಿ ಆರ್.ಗಿರೀಶ್ ಆದೇಶ

spot_img
- Advertisement -
- Advertisement -

ಹಾಸನ: ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ -75ರ ಶಿರಾಡಿ ಘಾಟ್ ನಲ್ಲಿ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಲಘು ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಈ ಬಗ್ಗೆ  ಹಾಸನ ಜಿಲ್ಲಾಧಿಕಾರಿ ಆರ್. ಗಿರೀಶ್ ಆದೇಶ ಹೊರಡಿಸಿದ್ದಾರೆ. ಆದರೆ, ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಮುಂದುವರಿದಿದೆ.

ಕಾರು, ಜೀಪು, ಟೆಂಪೊ, ಮಿನಿ ವ್ಯಾನ್‌, ಸಾರಿಗೆ ಸಂಸ್ಥೆಯ ಬಸ್‌, ರಾಜಹಂಸ, ಐರಾವತ ಬಸ್‌ಗಳು, 6 ಚಕ್ರದ ವಾಹನಗಳು, 20 ಟನ್ ಸಾಮರ್ಥ್ಯದ ಸರಕು ಸಾಗಣೆ ವಾಹನಗಳು ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಈ ಮಾರ್ಗದಲ್ಲಿ ಸಂಚರಿಸಬಹುದು. ಆಂಬುಲೆನ್ಸ್‌, ಅಗ್ನಿಶಾಮಕದಳದ ವಾಹನ ಸೇರಿದಂತೆ ತುರ್ತು ಸೇವಾ ವಾಹನಗಳು 24 ಗಂಟೆ ಸಂಚಾರ ಮಾಡಬಹುದು.

ಬುಲೆಟ್‌ ಟ್ಯಾಂಕರ್‌ಗಳು, ಕಾರ್ಗೋ ಕಂಟೈನರ್‌ಗಳು, ಉದ್ದ ಚಾಸಿ ಹೊಂದಿ ವಾಹನಗಳು, ಮಲ್ಟಿ ಎಕ್ಸೆಲ್‌ ಟ್ರಕ್‌ ಟ್ರೈಲರ್‌ಗಳು ಹಾಗೂ 20 ಟನ್‌ಗಿಂತ ಅಧಿಕ ಭಾರದ ಸರಕು ಸಾಗಣೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಜುಲೈ 15 ರಿಂದ ಇಲ್ಲಿಯವರೆಗೆ ಈ ರಸ್ತೆಯಲ್ಲಿ ಎಲ್ಲ ರೀತಿಯ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು.

- Advertisement -
spot_img

Latest News

error: Content is protected !!