Thursday, May 16, 2024
HomeUncategorizedಅರ್ಹತೆ ಇಲ್ಲದ 44 ಶಿಕ್ಷಕರು ಸೇವೆಯಿಂದ ಬಿಡುಗಡೆ: ಬಿಬಿಎಂಪಿ

ಅರ್ಹತೆ ಇಲ್ಲದ 44 ಶಿಕ್ಷಕರು ಸೇವೆಯಿಂದ ಬಿಡುಗಡೆ: ಬಿಬಿಎಂಪಿ

spot_img
- Advertisement -
- Advertisement -

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ನಡೆಸುವ ಶಾಲಾ ಕಾಲೇಜುಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಹಲವು ವರ್ಷಗಳಿಂದ ಶೈಕ್ಷಣಿಕ ಅರ್ಹತೆ ಇಲ್ಲದಿದ್ದರೂ ಸೇವೆ ಸಲ್ಲಿಸುತ್ತಿದ್ದ, ವಿದ್ಯಾರ್ಥಿಗಳಿಗೆ ಬೋಧಿಸಲು ಬೇಕಾದಷ್ಟು ಅರ್ಹತೆ ಹೊಂದಿಲ್ಲದ 44 ಶಿಕ್ಷಕರು ಮತ್ತು ಉಪನ್ಯಾಸಕರನ್ನು ಸೇವೆಯಿಂದ ಬಿಡುಗಡೆಗೊಳಿಸಲಾಗಿದೆ.

ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ಶಿಕ್ಷಕರಿಗೆ ಬೋಧನಾ ತರಬೇತಿ ನೀಡಲು ಬಿಬಿಎಂಪಿ ಶಾಲೆಗಳಲ್ಲಿ ನಿರ್ಧರಿಸಲಾಗಿತ್ತು. ಈ ಸಂದರ್ಭದಲ್ಲಿ ಕೆಲವು ಶಿಕ್ಷಕರು ಮತ್ತು ಉಪನ್ಯಾಸಕರು ಮಾನದಂಡದಂತೆ ಅರ್ಹ ವಿದ್ಯಾರ್ಹತೆ ಹೊಂದಿರಲಿಲ್ಲ. ಇವರಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಿಲ್ಲವೆಂದು ಅವರನ್ನು ಬಿಡುಗಡೆಗೊಳಿಸಿ, ಅರ್ಹ ಶಿಕ್ಷಕರನ್ನು ನೇಮಕ ಮಾಡುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಸಂದರ್ಭದಲ್ಲಿ ಅವರು, ಪ್ರೌಡ ಶಾಲೆಯ ಶಿಕ್ಷಕರು ಕಡ್ಡಾಯವಾಗಿ ಸ್ನಾತಕೋತರ ಪದವಿ, ಬಿ ಇಡಿ ಹಾಗೂ ವೃತ್ತಿಪರ ಶಿಕ್ಷಣ ಪಡೆದಿರಬೇಕು. ಆದರೆ, 24 ಶಿಕ್ಷಕರಲ್ಲಿ ಕೆಲವರು ಬಿ ಇಡಿ ಮಾಡಿರಲಿಲ್ಲ. ಇನ್ನೂ ಕೆಲವರು ಸ್ನಾತಕೋತರ ಪದವಿ ಪೂರೈಸಿರಲಿಲ್ಲ. ಮತ್ತೊಂದೆಡೆ ಪದವಿ ತರಗತಿಗೆ ಉಪನ್ಯಾಸ ಮಾಡಲು ರಾಷ್ಟ್ರೀಯ ಅರ್ಹತಾ ಪರೀಕ್ಷೆ ಅಥವಾ ರಾಜ್ಯ ಮಟ್ಟದ ಅರ್ಹತಾ ಪರೀಕ್ಷೆ ಉತ್ತೀರ್ಣರಾಗಿರಬೇಕು. ಮತ್ತು ಸ್ನಾತಕೋತ್ತರ ಪದವಿ ತರಗತಿಗಳಿಗೆ ಬೋಧಿಸುವವರು ಪಿಎಚ್‌ಡಿ ಮಾಡಿರಬೇಕು. ಆದರೆ 20 ಉಪನ್ಯಾಸಕರು ಎನ್‌ಇಟಿ, ಎಸ್ಎಲ್ಇಟಿ ಹಾಗೂ ಪಿಎಚ್‌ಡಿ ಮಾಡಿರಲಿಲ್ಲ ಎಂದು ತಿಳಿಸಿದರು.

- Advertisement -
spot_img

Latest News

error: Content is protected !!