Friday, June 5, 2026
Homeತಾಜಾ ಸುದ್ದಿವಿಧಾನ ಪರಿಷತ್ ನಾಲ್ಕು ಸ್ಥಾ‌ನಗಳಿಗೆ ಚುನಾವಣೆ ಘೋಷಣೆ: ಜೂನ್ 13 ರಂದು ಚುನಾವಣೆ

ವಿಧಾನ ಪರಿಷತ್ ನಾಲ್ಕು ಸ್ಥಾ‌ನಗಳಿಗೆ ಚುನಾವಣೆ ಘೋಷಣೆ: ಜೂನ್ 13 ರಂದು ಚುನಾವಣೆ

- Advertisement -
- Advertisement -

ಬೆಂಗಳೂರು: ವಿಧಾನ ಪರಿಷತ್ ನಾಲ್ಕು ಸ್ಥಾ‌ನಗಳಿಗೆ ಚುನಾವಣೆ ಘೋಷಣೆಯಾಗಿದೆ. ಎರಡು ಪದವೀಧರ ಮತ್ತು ಎರಡು ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ಘೋಷಣೆಯಾಗಿದ್ದು, ಪಶ್ಚಿಮ ಶಿಕ್ಷಕರ ಕ್ಷೇತ್ರ, ವಾಯುವ್ಯ ಪದವೀಧರ ಕ್ಷೇತ್ರ, ವಾಯುವ್ಯ ಶಿಕ್ಷಕರ ಕ್ಷೇತ್ರ ಮತ್ತು ದಕ್ಷಿಣ ಪದವೀಧರ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ.

ಮೇ ಹತ್ತೊಂಬತ್ತರಂದು ಚುನಾವಣಾ ಅಧಿಸೂಚನೆ ಹೊರ ಬೀಳಲಿದ್ದು, ನಾಮಪತ್ರ ಸಲ್ಲಿಕೆಗೆ ಮೇ 26 ಕೊನೆಯ ದಿನಾಂಕವಾಗಿದೆ. ಜೂನ್ ಹದಿಮೂರಂದು ಚುನಾವಣೆ ನಡೆಯಲಿದ್ದು, ಜೂನ್ ಹದಿನೈದರಂದು ಮತ ಎಣಿಕೆ ಕಾರ್ಯ ನಡೆಯಲಿದೆ.ಪದವೀಧರ ಕ್ಷೇತ್ರದಿಂದ ಆಯ್ಕೆಯಾದ ಹನುಮಂತ ನಿರಾಣಿ, ಕೆ.ಟಿ. ಶ್ರೀಕಂಠೇಗೌಡ, ಶಿಕ್ಷಕರ ಕ್ಷೇತ್ರದಿಂದ ಬಸವರಾಜ ಹೊರಟ್ಟಿ, ಅರುಣ್ ಶಹಾಪುರ ಅವಧಿ‌ ಜುಲೈ 7 ಕ್ಕೆ ಮುಕ್ತಾಯವಾಗಲಿದ್ದು, ಈ ಹಿನ್ನೆಲೆ ಚುನಾವಣೆ ಘೋಷಣೆಯಾಗಿದೆ.

- Advertisement -

Latest News

error: Content is protected !!