Thursday, June 4, 2026
HomeUncategorizedಕಿನ್ನಿಗೋಳಿ: ವಾಯುವಿಹಾರಕ್ಕೆ ಹೊರಟಿದ್ದ ಪಾದಚಾರಿಗೆ ಕಾರು ಡಿಕ್ಕಿ: ಗಂಭೀರ ಗಾಯಗೊಂಡ ವ್ಯಕ್ತಿ ಆಸ್ಪತ್ರೆಗೆ ದಾಖಲು

ಕಿನ್ನಿಗೋಳಿ: ವಾಯುವಿಹಾರಕ್ಕೆ ಹೊರಟಿದ್ದ ಪಾದಚಾರಿಗೆ ಕಾರು ಡಿಕ್ಕಿ: ಗಂಭೀರ ಗಾಯಗೊಂಡ ವ್ಯಕ್ತಿ ಆಸ್ಪತ್ರೆಗೆ ದಾಖಲು

- Advertisement -
- Advertisement -

ಮುಲ್ಕಿ: ಕಿನ್ನಿಗೋಳಿಯ ರಾಜರತ್ನಪುರ ವೀರ ಮಾರುತಿ ವ್ಯಾಯಾಮ ಶಾಲೆ ಕಟ್ಟಡದ ಎದುರು ಭಾಗದಲ್ಲಿ ವಾಯುವಿಹಾರಕ್ಕೆ ಹೊರಟ ವ್ಯಕ್ತಿಯೊಬ್ಬರಿಗೆ ಕಾರು ಡಿಕ್ಕಿಯಾಗಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಗಾಯಾಳುವನ್ನು ಸ್ಥಳೀಯ ನಿವಾಸಿ ಬಾಲಕೃಷ್ಣ ಕಿಣಿ (61) ಎಂದು ಗುರುತಿಸಲಾಗಿದೆ. ಗಾಯಾಳು ಬಾಲಕೃಷ್ಣ ಕಿಣಿ ರಾತ್ರಿ ಊಟ ಮುಗಿಸಿ ಮನೆಯ ಎದುರಿನಲ್ಲಿರುವ ರಸ್ತೆಯಲ್ಲಿ ವಾಯು ವಿಹಾರಕ್ಕೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ  ಕಟೀಲು ಕಡೆಯಿಂದ ಕಿನ್ನಿಗೋಳಿ ಕಡೆಗೆ ಒಳರಸ್ತೆಯಲ್ಲಿ ಹೋಗುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ

ಅಪಘಾತದಿಂದ ಬಾಲಕೃಷ್ಣ ಕಿಣಿ ರಸ್ತೆಗೆ ಬಿದ್ದು ಅವರ ತಲೆಯ ಎಡಬದಿಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಅಲ್ಲದೇ ಬಲ ಕೈ ಬೆರಳ ಬುಡದಲ್ಲಿ ಮತ್ತು ಬಲಕೈ ಮೊಣಗಂಟಿನಲ್ಲಿ ತರಚಿದ ಗಾಯವಾಗಿ ಕಿನ್ನಿಗೋಳಿ ಕನ್ಸೆಟ್ಟಾ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಬಳಿಕ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ .ಕಾರು ಚಾಲಕ ಮಹೇಶ್ ಕರ್ಕೇರ ವಿರುದ್ಧ ಸುರತ್ಕಲ್ ಉತ್ತರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!