- Advertisement -
- Advertisement -
ಕಡಬ: ಮಟ ಮಟ ಮಧ್ಯಾಹ್ನವೇ ಚಿರತೆಯೊಂದು ರಸ್ತೆ ದಾಟಿದ ಘಟನೆ ಪಂಜ ವಲಯ ಅರಣ್ಯ ವ್ಯಾಪ್ತಿಯ ಕುಟ್ರುಪ್ಪಾಡಿ ಗ್ರಾಮದ ದೇರಾಜೆ ಸಮೀಪದ ರಕ್ಷಿತಾರಣ್ಯದ ಬಳಿ ಜ.14 ರ ಮಧ್ಯಾಹ್ನ ನಡೆದಿದೆ.
ಪಟುಬೆಟ್ಟುವಿನ ಮಹಾಬಲ ಎಂಬವರು ತನ್ನ ಆಟೋದಲ್ಲಿ ದೇರಾಜೆ- ಇಚಿಲಂಪಾಡಿಯ ಮೂಲಕ ತೆರಳುತ್ತಿದ್ದಾಗ ಕೊಕ್ಕದ ಕಾಡು ಎಂಬಲ್ಲಿ ಚಿರತೆಯು ಏಕಾಏಕಿ ರಸ್ತೆ ದಾಟಿದೆ ಎನ್ನಲಾಗಿದೆ.. ಕೂಡಲೇ ತನ್ನ ಆಟೋ ವನ್ನು ನಿಲ್ಲಿದ್ದು 50 ಮೀಟರ್ ದೂರದ ವರೆಗೂ ಕಾಡಂಚಿನ ಪ್ರದೇಶದತ್ತ ಹೋಗುತ್ತಿರುವುದನ್ನು ಗಮನಿಸಿರುವುದಾಗಿ ತಿಳಿಸಿದ್ದಾರೆ.
ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಲು ಯತ್ನಿಸಿದರೂ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ ಎನ್ನಲಾಗಿದೆ.
- Advertisement -