- Advertisement -
- Advertisement -
ಮಂಗಳೂರು: ಕಾರ್ಯಾಚರಣೆ ವೇಳೆ ವಶಪಡಿಸಿಕೊಂಡಿದ್ದ ಬೃಹತ್ ಮೊತ್ತದ ಮಾದಕ ವಸ್ತುಗಳನ್ನು ಇಂದು ಪೊಲೀಸರು ನಾಶಪಡಿಸಿದ್ದಾರೆ.
ನ್ಯಾಯಾಲಯದ ಅನುಮತಿ ಪಡೆದು ಒಟ್ಟು ಆರು ಕೋಟಿ ಎಂಬತ್ತು ಲಕ್ಷದ ಎಂಬತ್ತಾರು ಸಾವಿರ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ನಾಶ ಮಾಡಲಾಗಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತಾಲಯದ ವ್ಯಾಪ್ತಿಯ ಹದಿಮೂರು ಠಾಣೆಗಳಿಗೆ ಸಂಬಂಧಿಸಿದ ಮಾದಕ ವಸ್ತುಗಳನ್ನು, ಮುಲ್ಕಿಯ ಕೊಲ್ನಾಡು ಕೈಗಾರಿಕಾ ಪ್ರದೇಶದಲ್ಲಿ ವಿಲೇವಾರಿ ಮಾಡಲಾಗಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ನೇತೃತ್ವದಲ್ಲಿ, ಗಾಂಜಾ, ಕೊಕೇನ್, ಎಂಡಿಎಂಎ ಸೇರಿದಂತೆ
ಸುಮಾರು 343 ಕೆಜಿ ಮಾದಕ ವಸ್ತುಗಳನ್ನು ಸುಟ್ಟು ಹಾಕಿ ನಾಶ ಮಾಡಲಾಗಿದೆ.
ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಹದಿಮೂರು ಠಾಣೆಗಳಲ್ಲಿ ಒಟ್ಟು 37 ಪ್ರಕರಣಗಳಲ್ಲಿ ಮಾದಕವಸ್ತುಗಳನ್ಜು ವಶಪಡಿಸಿಕೊಳ್ಳಲಾಗಿತ್ತು
- Advertisement -