Tuesday, June 23, 2026
Homeಕರಾವಳಿಮಂಗಳೂರುಕಣಿಯೂರು ಗ್ರಾಮ ಪಂಚಾಯತ್ ಸದಸ್ಯನಿಗೆ ಹಲ್ಲೆ ಪ್ರಕರಣ; ತಿಮರೊಡಿ ಗ್ಯಾಂಗ್ ಇಬ್ಬರು ಸದಸ್ಯರಿಗೆ ಜೈಲು ಶಿಕ್ಷೆ...

ಕಣಿಯೂರು ಗ್ರಾಮ ಪಂಚಾಯತ್ ಸದಸ್ಯನಿಗೆ ಹಲ್ಲೆ ಪ್ರಕರಣ; ತಿಮರೊಡಿ ಗ್ಯಾಂಗ್ ಇಬ್ಬರು ಸದಸ್ಯರಿಗೆ ಜೈಲು ಶಿಕ್ಷೆ ಪ್ರಕಟ

- Advertisement -
- Advertisement -

ಬೆಳ್ತಂಗಡಿ : ಕಣಿಯೂರಿನಲ್ಲಿ  ಅಂಗಡಿ ವ್ಯಾಪಾರ ನಡೆಸುತ್ತಿದ್ದ  ಕಣಿಯೂರು ಗ್ರಾಮ ಪಂಚಾಯತ್ ಸದಸ್ಯರಾಗಿದ್ದ ಪ್ರವೀಣ್ ಗೌಡ ಅವರ ಮೇಲೆ 28-07-2024 ರಂದು ಉಜಿರೆ ಮಹೇಶ್ ಶೆಟ್ಟಿ ತಿಮರೋಡಿ ಸಹಚರರಾದ ಕಿರಣ್ ಶಿಶಿಲ, ಪ್ರಜ್ವಲ್ ಕೆವಿ ಗೌಡ ಮತ್ತು ರಾಧಾಕೃಷ್ಣ ಗೌಡ ಬರಮೇಲು  ರವರು ಪ್ರವೀಣ್ ರವರ ಅಂಗಡಿ ಗೆ ಪ್ರವೇಶಿಸಿ ” ನೀನು ಮಹೇಶಣ್ಣ ನ ಬಗ್ಗೆ ಬಾರಿ ಮಾತನಾಡುತ್ತೀಯ ” ನೀನು ಪಂಚಾಯತ್ ಮೆಂಬರ್ ಎಂದು ಹಾರಾಡಬೇಡ ಎಂದು  ರಾಡ್ ನಿಂದ ಹಾಗೂ ಕೈಯಿಂದ ಹಲ್ಲೆ ನಡೆಸಿ, ಅವಾಚ್ಯವಾಗಿ ನಿಂದಿಸಿ ಜೀವಬೆದರಿಕೆ ಹಾಕಿದ್ದರು.

ಹಲ್ಲೆಗೊಳಗಾದ ಪ್ರವೀಣ್ ರವರು  ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಉಪ್ಪಿನಂಗಡಿ ಪೋಲೀಸರು ಪ್ರವೀಣ್ ರವರ ಹೇಳಿಕೆಯ ಪ್ರಕಾರ ಪ್ರಕರಣ ದಾಖಲಿಸಿ, ತನಿಖೆ ನಡೆಸಿ,ಬೆಳ್ತಂಗಡಿ ಹಿರಿಯ ಸಿವಿಲ್ ಮತ್ತು ಜೆ ಎಂ ಎಫ್ ಸಿ ನ್ಯಾಯಾಲಕ್ಕೆ  ಚಾರ್ಜ್ ಶೀಟ್ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ  ನ್ಯಾಯಾಲಯವು ಎ.1 ರಂದು ಕಿರಣ್ ಶಿಶಿಲ ಪ್ರಕರಣದ ವಿಚಾರಣೆಗೆ ಸರಿಯಾಗಿ  ಹಾಜರಾಗದ ಕಾರಣ ಆತನ ವಿರುದ್ಧ ಪ್ರತ್ಯೇಕ ವಿಭಜಿತ ಪ್ರಕರಣ ದಾಖಲಿಸಿ, ಉಳಿದ ಆರೋಪಿಗಳಾದ  ಪ್ರಜ್ವಲ್ ಕೆವಿ ಗೌಡ ಮತ್ತು ರಾಧಾಕೃಷ್ಣ ಗೌಡ ಬರಮೇಲು ಅವರ ಮೇಲಿನ ಪ್ರಕರಣ ದ ವಿಚಾರಣೆಯನ್ನು ಕೈಗೊಂಡು ಜೂನ್ 2 ರಂದು ಅಂತಿಮ ಆದೇಶ ಮಾಡಿದೆ. ಆದೇಶದ ಪ್ರಕಾರ ಪ್ರಜ್ವಲ್ ಕೆ. ವಿ ಗೌಡ ಹಾಗೂ ರಾಧಾಕೃಷ್ಣ ಗೆ ತಲಾ 6 ತಿಂಗಳ ಜೈಲು ಶಿಕ್ಷೆ ಮತ್ತು ರೂ 5 ಸಾವಿರ ದಂಡ ವಿಧಿಸಿ ಆದೇಶಿಸಿದೆ. ಅಭಿಯೋಜನೆಯ ಪರವಾಗಿ  ಎಪಿಪಿ ದಿವ್ಯರಾಜ್ ವಾದಿಸಿದ್ದಾರೆ.

- Advertisement -

Latest News

error: Content is protected !!