Tuesday, June 23, 2026
Homeಕರಾವಳಿಮಂಗಳೂರುಸುಳ್ಯ:  ಮೊಬೈಲ್ ನೋಡಿದ್ದಕ್ಕೆ ಅಮ್ಮ ಬುದ್ಧಿಮಾತು ಹೇಳಿದ್ದಕ್ಕೆ ಮನೆ ಬಿಟ್ಟು ಹೋದ ಬಾಲಕ

ಸುಳ್ಯ:  ಮೊಬೈಲ್ ನೋಡಿದ್ದಕ್ಕೆ ಅಮ್ಮ ಬುದ್ಧಿಮಾತು ಹೇಳಿದ್ದಕ್ಕೆ ಮನೆ ಬಿಟ್ಟು ಹೋದ ಬಾಲಕ

- Advertisement -
- Advertisement -

ಸುಳ್ಯ:  ಮೊಬೈಲ್ ನೋಡಿದ್ದಕ್ಕೆ ಅಮ್ಮ ಬುದ್ಧಿಮಾತು ಹೇಳಿದ್ದಕ್ಕೆ ಬಾಲಕ ಮನೆ ಬಿಟ್ಟು ಹೋದ ಘಟನೆ ಸುಳ್ಯ ತಾಲೂಕಿನ ಕಸಬಾ   ಗ್ರಾಮದ ಬೋರುಗುಡ್ಡೆ ಎಂಬಲ್ಲಿ ನಡೆದಿದೆ. ಈ ಬಗ್ಗೆ ಉತ್ತರ ಕನ್ನಡ ಶಿರಸಿ ನಿವಾಸಿ ಸಲ್ಮಾ (40) ಎಂಬವರು ದೂರು ನೀಡಿದ್ದಾರೆ.

ಉತ್ತರ ಕನ್ನಡ ಶಿರಸಿ ನಿವಾಸಿ ಸಲ್ಮಾ ಎಂಬವರು ಸದ್ಯ ಸುಳ್ಯ ತಾಲೂಕಿನ ಕಸಬಾ  ಗ್ರಾಮದ ಬೋರುಗುಡ್ಡೆ ಎಂಬಲ್ಲಿ ಪತಿ ಹಾಗೂ ಮಗನೊಂದಿಗೆ ವಾಸವಾಗಿದ್ದು, ದಿನಾಂಕ 30.05.2026 ರಂದು ಬೆಳಿಗ್ಗೆ ಅವರ ಮಗ ಸೈಯದ್ ಆಲಿ ಸೈಯದ್ ಗೌಸ (16) ಎಂಬಾತನಿಗೆ, ಮೊಬೈಲ್ ನೋಡುತ್ತಿರುವ ವಿಚಾರದಲ್ಲಿ ಸಲ್ಮಾ  ಬೈದು ಬುದ್ದಿಮಾತು ಹೇಳಿದ್ದು, ಸ್ವಲ್ಪ ಹೊತ್ತಿನ ಬಳಿಕ ಮಗ ಮನೆಯಿಂದ ಹೊರ ಹೋಗಿದ್ದಾನೆ. ಆತನು ಮರಳಿ ಮನೆಗೆ ಹಿಂತಿರುಗದಿದ್ದು, ಆತನ ಗೆಳೆಯರಲ್ಲಿ ಹಾಗೂ ಸಂಬಂಧಿಕರಲ್ಲಿ ವಿಚಾರಿಸಿ ಸುತ್ತಮುತ್ತಲಿನ ಪರಿಸರದಲ್ಲಿ ಹುಡುಕಾಡಿದ್ರೂ ಪತ್ತೆಯಾಗಿಲ್ಲ. ಹೀಗಾಗಿ ಸಲ್ಮಾಂ ಅವರು ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಅ.ಕ್ರ: 73/2026, ಕಲಂ:  137 (2) BNS 2023 ರಂತೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ..

- Advertisement -

Latest News

error: Content is protected !!