- Advertisement -
![]()
- Advertisement -
ಗುಂಡ್ಯ ; ಕಳೆದ ಹಲವು ದಿನಗಳಿಂದ ಕರಾವಳಿ ಹಾಗೂ ಪಶ್ಚಿಮ ಘಟ್ಟದಲ್ಲಿ ಭಾರೀ ಮಳೆಯಾಗುತ್ತಿರೋದರಿಂದ ಶಿರಾಡಿ ಘಾಟ್ ನ ಹಲವೆಡೆ ಗುಡ್ಡ ಕುಸಿತವಾಗಿದೆ.
ಸಕಲೇಶಪುರ ತಾಲೂಕಿನ ಹೆಗ್ಗದ್ದೆಯ ಬಳಿ ಅಲ್ಲಲ್ಲಿ ಭೂ ಕುಸಿತ ಆರಂಭವಾಗಿದ್ದು, ಹಿರಿಯ ಅಧಿಕಾರಿಗಳ ಸೂಚನೆಯಂತೆ ಲಘು ವಾಹನಗಳಿಗೆ ಕಾಡ ಮನೆ ಎಸ್ಟೇಟ್ ಮೂಲಕ ಸಾಗುವಂತೆ ತಿಳಿಸಲಾಗಿದೆ.
ಘನ ವಾಹನಗಳು ಹೆದ್ದಾರಿಯಲ್ಲೇ ಸಾಗುತ್ತಿವೆ. ಇನ್ನು ಮಳೆ ಮುಂದುವರೆದರೆ ಮತ್ತೆ ಭೂಕುಸಿತ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಅತ್ತ ಆಗುಂಬೆ ಘಾಟ್ ನಲ್ಲೂ ಗುಡ್ಡ ಕುಸಿತವಾಗಿದ್ದು ಮತ್ತೆ ಗುಡ್ಡ ಕುಸಿಯುವ ಭೀತಿಯಲ್ಲೇ ವಾಹನಗಳು ಸಂಚರಿಸುವಂತಾಗಿದೆ.
- Advertisement -


