- Advertisement -
![]()
- Advertisement -
ಬಂಟ್ವಾಳ: ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಭಾರೀ ಮಳೆಯಾಗುತ್ತಿದ್ದು, ಇಂದು ಮತ್ತು ನಾಳೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.ಜಿಲ್ಲೆಯ ಪ್ರಮುಖ ನದಿಗಳು ಉಕ್ಕಿ ಹರಿಯುತ್ತಿವೆ.
ಈ ಹಿನ್ನೆಲೆ ಬಂಟ್ವಾಳದಲ್ಲಿ ನೇತ್ರಾವತಿ ನದಿಯಲ್ಲಿ ನಿನ್ನೆ ಬೆಳಗ್ಗೆ ನೀರಿನ ಮಟ್ಟ 6.6 ಮೀ. ಇತ್ತು. ರಾತ್ರಿ ವೇಳೆಗೆ 7.3 ಮೀ.ಗೆ ಏರಿಕೆಯಾಗಿತ್ತು. ಇದು ಈ ವರ್ಷ ಮಳೆಗಾಲದ ಗರಿಷ್ಠ ಮಟ್ಟವಾಗಿದೆ. ಹಾಗಾಗಿ ಪ್ರವಾಹ ಭೀತಿ ಹಿನ್ನೆಲೆಯಲ್ಲಿ ಆಲಡ್ಕದ ಪರಿಸರದ 6 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.
ಇನ್ನು ಭಾರೀ ಮಳೆ ಹಿನ್ನೆಲೆ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಅಂಗನವಾಡಿ, ಶಾಲೆ ಹಾಗೂ ಪಿಯು ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ.
- Advertisement -


