Monday, July 20, 2026
Homeಕರಾವಳಿಮಂಗಳೂರುಕಡಬ: ಉಪ್ಪಿನಂಗಡಿಗೆ ಕೆಲಸಕ್ಕೆ ತೆರಳಿದ್ದ ಯುವಕ ಕಾಣೆ : ಪತ್ತೆಗೆ ಮನವಿ

ಕಡಬ: ಉಪ್ಪಿನಂಗಡಿಗೆ ಕೆಲಸಕ್ಕೆ ತೆರಳಿದ್ದ ಯುವಕ ಕಾಣೆ : ಪತ್ತೆಗೆ ಮನವಿ

- Advertisement -
- Advertisement -


ಕಡಬ: ಉಪ್ಪಿನಂಗಡಿಯ ಬಟ್ಟೆ ಅಂಗಡಿಗೆ ಕೆಲಸಕ್ಕೆ ತೆರಳಿದ್ದ ಯುವಕನೊಬ್ಬ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುವ ಘಟನೆ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕಡಬ ಗ್ರಾಮದ ಕಲಾರ ಅಡ್ಪಾಡಿ ನಿವಾಸಿ ಅಬ್ದುಲ್ ರಶೀದ್ ಕೆ. ಎಂಬವರ 21 ವರ್ಷದ ಪುತ್ರ ಮಹಮ್ಮದ್ ಅಕ್ಬರ್ ಕಾಣೆಯಾದ ಯುವಕ.

ಜುಲೈ 16ರಂದು ಬೆಳಿಗ್ಗೆ ಉಪ್ಪಿನಂಗಡಿಯ ‘ರೂಯಿನ್’ ಬಟ್ಟೆ ಅಂಗಡಿಗೆ ಕೆಲಸಕ್ಕೆಂದು ಮನೆ ಬಿಟ್ಟಿದ್ದ ಮಹಮ್ಮದ್ ಅಕ್ಬರ್, ಸಂಜೆಯಾದರೂ ಮನೆಗೆ ಮರಳಿಲ್ಲ. ಈ ಕುರಿತು ಕುಟುಂಬಸ್ಥರು ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪತ್ತೆ ಕಾರ್ಯ ಕೈಗೊಂಡಿದ್ದಾರೆ.

ಕಾಣೆಯಾದ ಯುವಕನ ಚಹರೆ:
ಎತ್ತರ: 5 ಅಡಿ, ಬಿಳಿ ಮೈಬಣ್ಣ, ಸಾಧಾರಣ ಮೈಕಟ್ಟು.

ಭಾಷೆಗಳು: ತುಳು, ಕನ್ನಡ, ಮಲಯಾಳಂ ಮತ್ತು ಬ್ಯಾರಿ.

ಧರಿಸಿದ್ದ ಬಟ್ಟೆ: ಕ್ರೀಮ್ ಹಾಗೂ ಗ್ರೇ ಬಣ್ಣದ ಗೆರೆಗಳಿರುವ ಟಿ-ಶರ್ಟ್ ಮತ್ತು ಗ್ರೇ ಬಣ್ಣದ ಪ್ಯಾಂಟ್.

ಈ ಚಹರೆಯುಳ್ಳ ವ್ಯಕ್ತಿ ಕಂಡುಬಂದಲ್ಲಿ ತಕ್ಷಣವೇ ಕಡಬ ಪೊಲೀಸ್ ಠಾಣೆಯನ್ನು (ಮೊ: 9480805364) ಸಂಪರ್ಕಿಸುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

- Advertisement -

Latest News

error: Content is protected !!