- Advertisement -
![]()
- Advertisement -
ಧರ್ಮಸ್ಥಳ : ಕೊರೊನಾ ರಗಳೆಯ ಮಧ್ಯೆಯ ನಡುವೆ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಕೊಂಚ ಖುಷಿ ಆವರಿಸಿದೆ. ಅಂದ್ಹಾಗೆ ಈ ಖುಷಿಗೆ ಕಾರಣ ದೇಗುಲದ ಆನೆ ಲಕ್ಷ್ಮೀ. ಹೌದು ಧರ್ಮಸ್ಥಳದ ಆನೆ ಲಕ್ಷ್ಮೀ ಮುದ್ದಾದ ಹೆಣ್ಣು ಮರಿಯೊಂದಕ್ಕೆ ಜನ್ಮ ನೀಡಿದ್ದಾಳೆ. ಲಕ್ಷ್ನೀ ಹೆಣ್ಣು ಮರಿಗೆ ಜನ್ಮ ನೀಡಿರೋದು ದೇವಾಲಯದ ಆಡಳಿತ ಮಂಡಳಿ, ಸಿಬ್ಬಂದಿ ಹಾಗೂ ಭಕ್ತರ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿದೆ.
ಇನ್ನು ಈ ಲಕ್ಷ್ಮೀ ಆನೆಯನ್ನು ವಿಜಯನಗರ ಶಾಸಕ ಆನಂದ್ ಸಿಂಗ್ ಅವರು 2009 ರಲ್ಲಿ ಧರ್ಮಸ್ಥಳ ದೇಗುಲಕ್ಕೆ ಕೊಡುಗೆಯಾಗಿ ನೀಡಿದ್ದರು. ಇದೀಗ ಆನೆ ಮರಿಗೆ ಜನ್ಮ ನೀಡಿರೋದು ಎಲ್ಲರ ಸಂತಸಕ್ಕೆ ಕಾರಣವಾಗಿದ್ದು, ಆನೆಯ ಮಾವುತ ಆನೆಯ ಆರೈಕೆಯಲ್ಲಿ ತೊಡಗಿದ್ದಾರೆ.
- Advertisement -


