Friday, June 5, 2026
Homeತಾಜಾ ಸುದ್ದಿಇರಾನ್‌: ತೆಹ್ರಾನ್‌ ವೈದ್ಯಕೀಯ ಕೇಂದ್ರದಲ್ಲಿ ಅನಿಲ ಸ್ಫೋಟ; 19 ಮಂದಿ ಸಾವು

ಇರಾನ್‌: ತೆಹ್ರಾನ್‌ ವೈದ್ಯಕೀಯ ಕೇಂದ್ರದಲ್ಲಿ ಅನಿಲ ಸ್ಫೋಟ; 19 ಮಂದಿ ಸಾವು

- Advertisement -
- Advertisement -

ತೆಹ್ರಾನ್‌: ಇರಾನ್‌ ರಾಜಧಾನಿ ತೆಹ್ರಾನ್‌ನ ಉತ್ತರ ಭಾಗದ ವೈದ್ಯಕೀಯ ಕ್ಲಿನಿಕ್‌ನಲ್ಲಿ ಅನಿಲ ಸೋರಿಕೆಯಿಂದ ಸ್ಫೋಟ ಸಂಭವಿಸಿ 19 ಜನ ಸಾವಿಗೀಡಾಗಿದ್ದಾರೆ. ಈ ಕುರಿತು ಇರಾನ್‌ನ ಟಿವಿ ಮಾಧ್ಯಮ ಮಂಗಳವಾರ ವರದಿ ಮಾಡಿದೆ.

ಮೃತರ ಪೈಕಿ 15 ಮಹಿಳೆಯರು ಹಾಗೂ ನಾಲ್ವರು ಪುರುಷರು.

ಈ ಕುರಿತು ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸ್ಪೋಟದ ನಂತರ ಅಗ್ನಿಶಾಮಕ ಸಿಬ್ಬಂದಿ ಕಟ್ಟಡ ಹತ್ತಿ ಕೆಲವರನ್ನು ರಕ್ಷಿಸಿದ್ದಾರೆ. ವೈದ್ಯಕೀಯ ಕೇಂದ್ರದಲ್ಲಿ ಆಕ್ಷಿಜನ್ ತುಂಬಿದ ಟ್ಯಾಂಕ್ ಗಳಿದ್ದವು. ಮಾತ್ರವಲ್ಲದೆ 25ಕ್ಕೂ ಹೆಚ್ಚು ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದರು. ಈ ವೇಳೆ ಹಲವು ಬಾರಿ ಸ್ಪೋಟ ಸಂಭವಿಸಿದ್ದು, ಕಟ್ಟಡ ಪೂರ್ತಿ ಬೆಂಕಿ ವ್ಯಾಪಿಸಿದೆ.

https://twitter.com/Navid2019/status/1278065935190982658

ಕಳೆದವಾರ ತೆಹ್ರಾನ್​ ಸೂಕ್ಷ್ಮ ಮಿಲಿಟರಿ ಪ್ರದೇಶದ ಸಮೀಪ ಸ್ಪೋಟವೊಂದು ಸಂಭವಿಸಿತ್ತು. ಅನಿಲ ಸಂಗ್ರಹಣೆಯ ಪ್ರದೇಶದಲ್ಲಿ ಟ್ಯಾಂಕರ್​ನಿಂದ ಗ್ಯಾಸ್​ ಲೀಕ್​ ಆಗಿ ಸ್ಪೋಟ ಸಂಭವಿಸಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿತ್ತು. ಆದರೆ, ಘಟನೆಯಲ್ಲಿ ಯಾವ ಪ್ರಾಣ ಹಾನಿ ಸಂಭವಿಸಿರಲಿಲ್ಲ.

- Advertisement -

Latest News

error: Content is protected !!