Friday, June 5, 2026
Homeಕರಾವಳಿಉಡುಪಿಕಾಪು: ವಿದೇಶದಿಂದ ಬಂದಿದ್ದ ಒಂದು ವರ್ಷದ ಮಗುವಿಗೆ ಕೊರೋನ

ಕಾಪು: ವಿದೇಶದಿಂದ ಬಂದಿದ್ದ ಒಂದು ವರ್ಷದ ಮಗುವಿಗೆ ಕೊರೋನ

- Advertisement -
- Advertisement -

ಕಾಪು: ಲಾಕ್‌ಡೌನ್‌ ಸಡಿಲಿಕೆ ನಂತರ ರಾಜ್ಯದಲ್ಲಿ ಕೊರೊನಾ ವೈರಸ್‌ ಆರ್ಭಟಿಸುತ್ತಿದೆ. ದಿನ ನಿತ್ಯ ಕೊರೊನಾ ಸೋಂಕಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಮೂರು ದಿನಗಳ ಹಿಂದೆ ತಾಯಿಯೊಂದಿಗೆ ವಿದೇಶದಿಂದ ಬಂದಿದ್ದ ಕಳತ್ತೂರಿನ ಒಂದು ವರ್ಷದ ಮಗುವಿನ ದೇಹಕ್ಕೆ ಮಹಾಮಾರಿ ಕೊರೋನಾ ತಗುಲಿದೆ.

ಮೂರು ದಿನಗಳ ಹಿಂದೆ ಮಗು, ತನ್ನ ತಾಯಿ ಮತ್ತು ಸಹೋದರನ ಜೊತೆ ಅಬುಧಾಬಿಯಿಂದ ಉಡುಪಿಗೆ ಆಗಮಿಸಿದ್ದರು. ಒಂದು ವರ್ಷದ ಮಗು ಇದ್ದ ಕಾರಣ ಇವರನ್ನು ಸಾಂಸ್ಥಿಕ ಕ್ವಾರಂಟೇನ್‌ಗೆ ಒಳಪಡಿಸದೆ ಮನೆಗೆ ಕಳುಹಿಸಲಾಗಿತ್ತು. ಇಂದು ಬಂದ ವರದಿಯಲ್ಲಿ ಮಗುವಿಗೆ ಮಾತ್ರ ಪಾಸಿಟಿವ್ ಬಂದು, ತಾಯಿ ಮತ್ತು ಸಹೋದರನಿಗೆ ನೆಗೆಟಿವ್ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

Latest News

error: Content is protected !!