Friday, May 17, 2024
Homeತಾಜಾ ಸುದ್ದಿಮಹಾರಾಷ್ಟ್ರದಲ್ಲಿ ಆರ್ಭಟಿಸುತ್ತಿರುವ ಕಿಲ್ಲರ್ ಕೊರೋನಾ: ಒಂದೇ ದಿನ 4,878 ಮಂದಿಗೆ ಪಾಸಿಟಿವ್

ಮಹಾರಾಷ್ಟ್ರದಲ್ಲಿ ಆರ್ಭಟಿಸುತ್ತಿರುವ ಕಿಲ್ಲರ್ ಕೊರೋನಾ: ಒಂದೇ ದಿನ 4,878 ಮಂದಿಗೆ ಪಾಸಿಟಿವ್

spot_img
- Advertisement -
- Advertisement -

ಮುಂಬೈ: ದೇಶದ ಆರ್ಥಿಕ ರಾಜಧಾನಿ ಮಹಾರಾಷ್ಟ್ರದಲ್ಲಿ ಕ್ರೂರಿ ಕೊರೊನಾ ವೈರಸ್ ತನ್ನ ಅಟ್ಟಹಾಸ ಮುಂದುವರೆದಿದ್ದು, ನಿನ್ನೆ ಒಂದೇ ದಿನ 4878 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 245 ಮಂದಿ ಕಿಲ್ಲರ್ ಕೊರೊನಾಗೆ ಬಲಿಯಾಗಿದ್ದಾರೆ.

ಮಹಾರಾಷ್ಟ್ರದಲ್ಲಿ ಈ ವರೆಗೆ 1,74,761 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಸದ್ಯ 75,979 ಸಕ್ರಿಯ ಪ್ರಕರಣಗಳಿವೆ.

ಮಹಾರಾಷ್ಟ್ರದಲ್ಲಿ ಈವರೆಗೆ 4,861 ಪೊಲೀಸರಿಗೆ ಸೋಂಕು ದೃಢಪಟ್ಟಿದ್ದು, ಈ ಪೈಕಿ 3699 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾದರೆ 59 ಮಂದಿ ಕೊರೊನಾ ಮಹಾಮಾರಿಗೆ ಬಲಿಯಾಗಿದ್ದಾರೆ.

ಇನ್ನು ತಮಿಳುನಾಡಿನಲ್ಲಿ ಕೊರೊನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಒಂದೇ ದಿನ 3943 ಹೊಸ ಪ್ರಕರಣಗಳು ದೃಢಪಟ್ಟಿವೆ. 60 ಮಂದಿ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಈ ಮೂಲಕ ಕೊರೊನಾಗೆ ಬಲಿಯಾದವರ ಸಂಖ್ಯೆ 1,201 ಕ್ಕೆ ಏರಿಕೆಯಾಗಿದೆ.

- Advertisement -
spot_img

Latest News

error: Content is protected !!