- Advertisement -
![]()
- Advertisement -
ಬೆಂಗಳೂರು : ಶೋಕಿಗಾಗಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಲೇಡಿ ಗ್ಯಾಂಗ್ ಒಂದನ್ನು ಬೆಂಗಳೂರಿನ ದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ತೆಲಂಗಾಣದ ಪ್ರಕಾಶಂ ಜಿಲ್ಲೆಯ ಸುಮಲತಾ(24) , ಅಂಕಮ್ಮ (30), ರಮ್ಯಾ(19) ಇಸ್ಮಾಯಿಲ್(19) ಬಂಧಿತರು. ಬಂಧಿತರಲ್ಲಿ ಸುಮಲತಾ ಮತ್ತು ರಮ್ಯಾ ಇಬ್ಬರೂ ಆಪ್ತ ಸ್ನೇಹಿತೆಯರಾಗಿದ್ದು, ಶೋಕಿಗಾಗಿ ಹೊಸ ಕಾರು ಖರೀದಿಸಿ ಕಳವು ಮಾಡ್ತಿದ್ದರು.
ಹೈದರಾಬಾದ್ನಿಂದ ಬೆಂಗಳೂರಿಗೆ ಲಾಂಗ್ ಡ್ರೈವ್ ಬಂದಿದ್ದ ಟೀಂ, ಬೆಳಗಿನ ಜಾವ ಹೆದ್ದಾರಿ ಪಕ್ಕದ ಅಂಗಡಿಯಲ್ಲಿ ಕಳ್ಳತನ ಮಾಡಿದ್ದಾರೆ. ಬಂಧಿತರಿಂದ ವ್ಯಾಗನಾರ್ ಕಾರು, ಕಳ್ಳತನಕ್ಕೆ ಬಳಸುತ್ತಿದ್ದ ರಾಡ್ಗಳನ್ನು ವಶಕ್ಕೆ ಪಡೆಯಲಾಗಿದ್ದು, ದೇವನಹಳ್ಳಿ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
- Advertisement -


