Sunday, June 7, 2026
Homeತಾಜಾ ಸುದ್ದಿಬೆಂಗಳೂರಿನಲ್ಲಿ ಮಹಿಳಾ ಡಿವೈಎಸ್ಪಿ ಆತ್ಮಹತ್ಯೆ: ಸಿಐಡಿ ಡಿವೈಎಸ್ಪಿ ಲಕ್ಷ್ಮೀ ನೇಣಿಗೆ ಶರಣು

ಬೆಂಗಳೂರಿನಲ್ಲಿ ಮಹಿಳಾ ಡಿವೈಎಸ್ಪಿ ಆತ್ಮಹತ್ಯೆ: ಸಿಐಡಿ ಡಿವೈಎಸ್ಪಿ ಲಕ್ಷ್ಮೀ ನೇಣಿಗೆ ಶರಣು

- Advertisement -
- Advertisement -

ಬೆಂಗಳೂರು:. ಸಿಐಡಿ ಡಿವೈಎಸ್​ಪಿ ವಿ. ಲಕ್ಷ್ಮಿ ಬೆಂಗಳೂರಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 33 ವರ್ಷದ ಲಕ್ಷ್ಮಿ ಶವವಾಗಿ ಪತ್ತೆಯಾಗಿದ್ದಾರೆ.

ಸಿಐಡಿಯ ಡಿವೈಎಸ್​ಪಿ ವಿ ಲಕ್ಷ್ಮೀ ತಮ್ಮ ಪರಿಚಿತರ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದ ಪರಿಚಿತರ ಮನೆಯಲ್ಲಿ ಅವರು ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ನಿನ್ನೆ ತಮ್ಮ ಪರಿಚಿತರ ಮನೆಗೆ ಊಟಕ್ಕೆ ತೆರಳಿದ್ದ ಲಕ್ಷ್ಮೀ ಅದೇ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿನ್ನೆ ರಾತ್ರಿ ಸ್ನೇಹಿತರ ಮನೆಯಲ್ಲಿ ರಾತ್ರಿ ಪಾರ್ಟಿ ಮಾಡಿದ್ದ ಲಕ್ಷ್ಮೀ ಅವರು ಬಳಿಕ ರಾತ್ರಿ 10.30ರ ಸುಮಾರಿಗೆ ರೂಂನಲ್ಲಿ ನೇಣು ಬಿಗಿದುಕೊಂಡಿದ್ದಾರೆ. ಲಕ್ಷ್ಮೀ ಅವರ ಗಂಡ ಹೈದರಾಬಾದ್ ಗೆ ತೆರಳಿದ್ದರು. ಲಕ್ಷ್ಮೀ ಅವರ ಸ್ನೇಹಿತನ ಅಪಾರ್ಟ್ ಮೆಂಟ್​ನಲ್ಲಿ ಕೊವೀಡ್ ಕೇರ್ ಸೆಂಟರ್ ತೆರೆಯಲಾಗಿತ್ತು. ಹಾಗಾಗಿ, ಆಗಾಗ ಅಲ್ಲಿಗೆ ಹೋಗುತ್ತಿದ್ದ ಲಕ್ಷ್ಮೀ ನಿನ್ನೆ ಕೂಡ ಅಲ್ಲಿಗೆ ತೆರಳಿದ್ದರು.

ಅವರು ಕಳೆದ ಕೆಲ ತಿಂಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ನಿನ್ನೆ ರಾತ್ರಿ ಊಟಕ್ಕೆ ಹೋದ ವೇಳೆ ಸ್ನೇಹಿತರ ಜೊತೆ ಪಾರ್ಟಿ ಮಾಡಿದ್ದ ಲಕ್ಷ್ಮೀ ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾರೆ.

33 ವರ್ಷದ ಲಕ್ಷ್ಮೀ 2014ರ ಬ್ಯಾಚ್​ನ ಕೆಎಸ್​ಪಿಎಸ್ ಅಧಿಕಾರಿ. 2017ರಲ್ಲಿ ಸಿಐಡಿ ಡಿವೈಎಸ್​ಪಿಯಾಗಿ ಅವರು ನೇಮಕಗೊಂಡಿದ್ದರು. ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಸಾವಿನ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

- Advertisement -

Latest News

error: Content is protected !!