Sunday, August 30, 2026
Homeತಾಜಾ ಸುದ್ದಿಅಶ್ಲೀಲ ವಿಡಿಯೋ ನೋಡುವಂತೆ ಪತಿಯಿಂದಲೇ ಕಿರುಕುಳ: ಪೊಲೀಸ್ ಠಾಣೆ ಮೆಟ್ಟಿಲೇರಿದ ವೈದ್ಯೆ

ಅಶ್ಲೀಲ ವಿಡಿಯೋ ನೋಡುವಂತೆ ಪತಿಯಿಂದಲೇ ಕಿರುಕುಳ: ಪೊಲೀಸ್ ಠಾಣೆ ಮೆಟ್ಟಿಲೇರಿದ ವೈದ್ಯೆ

- Advertisement -
- Advertisement -

ಬೆಂಗಳೂರು: ಅಶ್ಲೀಲ ವಿಡಿಯೋ ನೋಡುವಂತೆ ಪತಿಯೇ ಕಿರುಕುಳ ನೀಡುತ್ತಿದ್ದಾರೆಂದು ವೈದ್ಯೆಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಪತಿ ಲತೀರ್ ರೆಹಮಾನ್ ವಿರುದ್ಧ ವೈದ್ಯೆ ದೂರು ದಾಖಲಿಸಿದ್ದು, ದೂರಿನ ಆಧಾರದ ಮೇಲೆ ಪೊಲೀಸರು ಎಫ್‍ಐಆರ್ ರಿಜಿಸ್ಟರ್ ಮಾಡಿದ್ದಾರೆ. ಅಶ್ಲೀಲ ವಿಡಿಯೋ ನೋಡುವಂತೆ ಪತಿ ಕಿರುಕುಳ ನೀಡುತ್ತಾನೆ ಎಂದು ಕಿರುಕುಳ ತಾಳಲಾರದೆ ವೈದ್ಯೆ ಬಸವನಗುಡಿಯ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿ ಲತೀರ್ ರೆಹಮಾನ್ ಖಾಸಗಿ ಕಂಪನಿ ಉದ್ಯೋಗಿಯಾಗಿದ್ದಾನೆ.

ಲತೀರ್ ರೆಹಮಾನ್ 2019ರ ಜೂನ್ ವೈದ್ಯೆಯನ್ನು ವಿವಾಹವಾಗಿದ್ದು, ವಿವಾಹ ಬಳಿಕ ಆರಂಭದಲ್ಲಿ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದ. ಹೆಚ್ಚಿನ ವರದಕ್ಷಿಣೆಗಾಗಿ ಗಂಡನ ಮನೆಯವರು ನನ್ನ ಚಿನ್ನಾಭರಣ ಕಸಿದು ಹೊರದಬ್ಬಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

ಜುಲೈ 22, 2019ರಂದು ನಮ್ಮ ಮನೆಯವರು ಮುಸ್ಲಿಂ ಸಂಪ್ರದಾಯದಂತೆ ವಿವಾಹ ಮಾಡಿದ್ದು, ಈ ವೇಳೆ ಚಿನ್ನದ ಒಡವೆ, ಕಾರ್ ಹಾಗೂ ಗೃಹೋಪಯೋಗಿ ಸಾಮಗ್ರಿಗಳನ್ನು ನೀಡಿ ಅದ್ಧೂರಿಯಾಗಿ ವಿವಾಹ ಮಾಡಿ ಕೊಟ್ಟಿದ್ದಾರೆ. ವಿವಾಹವಾದ ಬಳಿಕ ನೀನು ನೋಡಲು ಚೆನ್ನಾಗಿಲ್ಲ. ನಮಗೆ ಇನ್ನೂ ಹೆಚ್ಚಿನ ವರದಕ್ಷಿಣೆ ನೀಡುವ ಶ್ರೀಮಂತ ಮನೆಯವರು ಸಿಗುತ್ತಿದ್ದರು ಎಂದು ಪ್ರತಿ ದಿನ ಬಾಯಿಗೆ ಬಂದಂತೆ ಬೈದು ಅವಮಾನ ಮಾಡುತ್ತಿದ್ದಾರೆ. ನಿನ್ನನ್ನು ಇಷ್ಟಪಟ್ಟು ವಿವಾಹವಾಗಿಲ್ಲ ಹೆಚ್ಚಿನ ವರದಕ್ಷಿಣೆ ನೀಡುತ್ತೀರೆಂದು ವಿವಾಹವಾದೆ ಎಂದು ಕಿರುಕುಳ ನೀಡುತ್ತಿದ್ದಾನೆ. ಎಂದು ಆರೋಪ ಮಾಡಿದ್ದಾರೆ.

- Advertisement -

Latest News

error: Content is protected !!