Friday, April 26, 2024
Homeಕರಾವಳಿಸುಬ್ರಮಣ್ಯದಲ್ಲಿ 70 ಸಾವಿರ ಮೌಲ್ಯದ ಬ್ಯಾಗ್ ನ್ನು ಬಸ್ ನಲ್ಲಿ ಬಿಟ್ಟ ಪ್ರಯಾಣಿಕ: ಬ್ಯಾಗ್ ಹಿಂದಿರುಗಿಸಿ...

ಸುಬ್ರಮಣ್ಯದಲ್ಲಿ 70 ಸಾವಿರ ಮೌಲ್ಯದ ಬ್ಯಾಗ್ ನ್ನು ಬಸ್ ನಲ್ಲಿ ಬಿಟ್ಟ ಪ್ರಯಾಣಿಕ: ಬ್ಯಾಗ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ KSRTC ಚಾಲಕ, ನಿರ್ವಾಹಕ

spot_img
- Advertisement -
- Advertisement -

ಸುಬ್ರಮಣ್ಯ: ಪ್ರಯಾಣಿಕರೊಬ್ಬರು ಬಸ್ಸಿನಲ್ಲಿ ಬಿಟ್ಟು ಹೋಗಿದ್ದ ಬೆಲೆಬಾಳುವ ಬ್ಯಾಗನ್ನು ಅವರಿಗೇ ಹಿಂದಿರುಗಿಸುವ ಮೂಲಕ ಕೆಎಸ್​ಆರ್​ಟಿಸಿ ಚಾಲಕ ಮತ್ತು ನಿರ್ವಾಹಕ ಪ್ರಾಮಾಣಿಕತೆ ಮೆರೆದಿರುವ ಘಟನೆ ಸುಬ್ರಹ್ಮಣ್ಯದಲ್ಲಿ ನಡೆದಿದೆ.

ಜನವರಿ 16ರಂದು ಸುಬ್ರಹ್ಮಣ್ಯ ರೈಲ್ವೇ ನಿಲ್ದಾಣದಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಪ್ರಯಾಣಿಕ ಸುಮಾರು ₹ 70 ಸಾವಿರ ಬೆಲೆಬಾಳುವ ಲ್ಯಾಪ್​ಟಾಪ್​ ಇದ್ದ ಬ್ಯಾಗನ್ನು KA 21 F 0039 ಸಂಖ್ಯೆಯ ಬಸ್ಸಿನಲ್ಲಿಯೇ ಬಿಟ್ಟು ಹೋಗಿದ್ದರು.

ಬಸ್ಸಿನಲ್ಲಿ ಬ್ಯಾಗ್​ ಇರುವುದನ್ನು ಗಮನಿಸಿದ ಚಾಲಕ ಇಸುಬ್​ ಅಲಿ ಮತ್ತು ನಿರ್ವಾಹಕ ಮಂಜು ತಕ್ಷಣವೇ ಕಾರ್ಯ ಪ್ರವೃತ್ತರಾಗಿ ಪ್ರಯಾಣಿಕನನ್ನು ಹುಡುಕಲು ಆರಂಭಿಸಿದ್ದಾರೆ. ಅವರಿಬ್ಬರ ಪ್ರಯತ್ನದ ಫಲವಾಗಿ ಕೊನೆಗೂ ಬ್ಯಾಗ್​ ಬಿಟ್ಟು ಹೋಗಿದ್ದ ಪ್ರಯಾಣಿಕ ಪತ್ತೆಯಾಗಿದ್ದು, ಸುಬ್ರಹ್ಮಣ್ಯ ಬಸ್ ನಿಲ್ದಾಣದಲ್ಲಿ ಅವರಿಗೆ ಬ್ಯಾಗ್ ಹಿಂದಿರುಗಿಸಲಾಗಿದೆ. ಚಾಲಕ ಮತ್ತು ನಿರ್ವಾಹಕರ ಪ್ರಾಮಾಣಿಕತೆಯನ್ನು ಮೆಚ್ಚಿದ ಅಧಿಕಾರಿಗಳು ಹಾಗೂ ಸಾರ್ವಜನಿಕರು ಇಬ್ಬರಿಗೂ ಅಭಿನಂದನೆ ಸಲ್ಲಿಸಿದ್ದಾರೆ.

- Advertisement -
spot_img

Latest News

error: Content is protected !!