Thursday, June 4, 2026
Homeತಾಜಾ ಸುದ್ದಿಗುಂಡ್ಯ: ಕೆಎಸ್ಸಾರ್ಟಿಸಿ ಬಸ್ - ಕಂಟೇನರ್ ಲಾರಿ ನಡುವೆ ಅಪಘಾತ - ಐವರು ಗಂಭೀರ

ಗುಂಡ್ಯ: ಕೆಎಸ್ಸಾರ್ಟಿಸಿ ಬಸ್ – ಕಂಟೇನರ್ ಲಾರಿ ನಡುವೆ ಅಪಘಾತ – ಐವರು ಗಂಭೀರ

- Advertisement -
- Advertisement -

ಗುಂಡ್ಯ: ಬಸ್ ಹಾಗೂ ಕಂಟೇನರ್ ನಡುವೆ ಢಿಕ್ಕಿ ಸಂಭವಿಸಿ ದ ಪರಿಣಾಮ ಐವರು ಗಂಭೀರ ಗಾಯಗೊಂಡ ಘಟನೆ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುಂಡ್ಯ ಸಮೀಪ ಶನಿವಾರದಂದು ಸಂಭವಿಸಿದೆ.


ಧರ್ಮಸ್ಥಳದಿಂದ ಹಾಸನ ಕಡೆಗೆ ತೆರಳುತ್ತಿದ್ದ ಬಸ್ ಹಾಗೂ ಮಂಗಳೂರು ಕಡೆಗೆ ತೆರಳುತ್ತಿದ್ದ ಕಂಟೇನರ್ ನಡುವೆ ಗುಂಡ್ಯ ಸಮೀಪದ ತಿರುವಿನಲ್ಲಿ ಅಪಘಾತ ಸಂಭವಿಸಿದೆ.


ಕಂಟೇನರ್ ಚಾಲಕ, ಬಸ್ ಚಾಲಕ, ನಿರ್ವಾಹಕ, ಹಾಗೂ ಇಬ್ಬರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿ ದ್ದಾರೆ. ಉಳಿದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿ ದ್ದಾರೆ.

- Advertisement -

Latest News

error: Content is protected !!