Monday, April 29, 2024
Homeಕ್ರೀಡೆಬ್ಯಾಕ್ ಟು ಬ್ಯಾಕ್ ಡಕೌಟ್ ಆದ ಕೊಹ್ಲಿ: ಕೆರಳಿದ ಫ್ಯಾನ್ಸ್​ನಿಂದ ಕೊಹ್ಲಿಗೆ ‘ಡಕಪ್ಪ’ ಎಂದು ನಾಮಕರಣ

ಬ್ಯಾಕ್ ಟು ಬ್ಯಾಕ್ ಡಕೌಟ್ ಆದ ಕೊಹ್ಲಿ: ಕೆರಳಿದ ಫ್ಯಾನ್ಸ್​ನಿಂದ ಕೊಹ್ಲಿಗೆ ‘ಡಕಪ್ಪ’ ಎಂದು ನಾಮಕರಣ

spot_img
- Advertisement -
- Advertisement -

ಬೆಂಗಳೂರು : ಅದ್ಯಾಕೋ ಈ ಬಾರಿ ಐಪಿಎಲ್​​ನಲ್ಲಿ ಕಿಂಗ್​ ಕೊಹ್ಲಿಗೆ ಅದೃಷ್ಟ ಕೈಕೊಟ್ಟಿದೆ. ಕ್ಯಾಪ್ಟನ್ಸಿ  ತ್ಯಜಿಸಿದ್ರೂ ಬ್ಯಾಡ್‌ ​​ಲಕ್​ ಬಿಟ್ಟು ಹೋಗಿಲ್ಲ. ಆರ್​​​​ಸಿಬಿ ತಂಡ ಉತ್ತಮ ಪ್ರದರ್ಶನ ನೀಡ್ತಿದ್ರೂ ಕೊಹ್ಲಿ ಮಾತ್ರ ರನ್​ ಬರ ಎದುರಿಸ್ತಿದ್ದಾರೆ. ಪಂದ್ಯ ನಡೆದಾಗಲೆಲ್ಲಾ  ವಿರಾಟ್ ಆರ್ಭಟಿಸ್ತಾರೆ ಅಂತಾ ಫ್ಯಾನ್ಸ್​ ಬಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ. ಆದ್ರೆ ಆ ಆಸೆಗೆ ಪ್ರತಿ ಪಂದ್ಯದಲ್ಲಿ ವಿರಾಟ್ ಕೊಳ್ಳಿಯಿಡ್ತಿದ್ದಾರೆ.

ಹೌದು, ಮೊದಲ ಆರು ಪಂದ್ಯಗಳಲ್ಲಿ ನೀರಸ ಆಟವಾಡಿ ಕೊಹ್ಲಿ ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾಗಿದ್ರು. ತಂಡದಿಂದ ವಿರಾಟ್​​​​​ಗೆ ಗೇಟ್​​​ಪಾಸ್​​​ ಕೊಡ್ಬೇಕು ಅನ್ನೋ ಟಾಕ್ಸ್​ ಕೇಳಿ ಬಂದಿತ್ತು. ಈಗ ಆ ಪಿತ್ತ ಮತ್ತಷ್ಟು ನೆತ್ತಿಗೇರುವಂತೆ ಮಾಡಿದ್ದಾರೆ. ಮೊನ್ನೆ ಹೈದ್ರಾಬಾದ್​​ ವಿರುದ್ಧ ಕೊಹ್ಲಿ ಮತ್ತೆ ಸೊನ್ನೆ ಸುತ್ತುವ ಮೂಲಕ ಫ್ಯಾನ್ಸ್​ ಕೆರಳಿ ಕೆಂಡಾಮಂಡಲರಾಗುವಂತೆ ಮಾಡಿದ್ದಾರೆ.

ಲಕ್ನೋ ಸೂಪರ್​​ ಜೈಂಟ್ಸ್​  ವಿರುದ್ಧ ಡಕೌಟ್ ಆಗಿದ್ದ ಕೊಹ್ಲಿ, ಹೈದ್ರಬಾದ್​​​​ ವಿರುದ್ಧವೂ ಅದನ್ನೇ ಮುಂದುವರಿಸಿದ್ರು. ಎದುರಿಸಿದ ಮೊದಲ ಎಸೆತದಲ್ಲೇ ಕ್ಯಾಚ್​ ನೀಡಿ ಪೆವಿಲಿಯನ್ ಸೇರಿದ್ರು. ಆ ಮೂಲಕ ಬ್ಯಾಕ್ ಟು ಬ್ಯಾಕ್ ಡಕೌಟ್​ ಲಿಸ್ಟ್​​ಗೆ ಸೇರಿಕೊಂಡ್ರು. ಇನ್ನು ವಿರಾಟ್ ಸೊನ್ನೆ ಸುತ್ತುತ್ತಿರೋದನ್ನ ಕಂಡು ಅಭಿಮಾನಿಗಳು ಕೆರಳಿದ್ದು, ಕೊಹ್ಲಿಯನ್ನ ‘ಡಕಪ್ಪ’ ಎಂದು ಟ್ರೋಲ್​​ ಮಾಡ್ತಿದ್ದಾರೆ.

2017, ಏಪ್ರಿಲ್​ 23. ಈ ದಿನವನ್ನ ಆರ್​ಸಿಬಿ ಫ್ಯಾನ್ಸ್​​ ಎಂದೂ ಮರೆಯಲು ಸಾಧ್ಯವಿಲ್ಲ. ಯಾಕಂದ್ರೆ ಆರ್​ಸಿಬಿ ತಂಡ ಈ ದಿನ ಐಪಿಎಲ್​ ಹಿಸ್ಟರಿಯಲ್ಲಿ ಜಸ್ಟ್​ 49 ರನ್​ಗೆ ಆಲೌಟಾಗಿತ್ತು. ಆ ಪಂದ್ಯದಲ್ಲಿ ಕೊಹ್ಲಿ ಸೊನ್ನೆ ಸುತ್ತಿದ್ರು. ಮೊನ್ನೆ ಪಂದ್ಯದಲ್ಲೂ ವಿರಾಟ್ ಡಕೌಟ್​​​​​​ ಆಗುವ ಮೂಲಕ ಕೊಹ್ಲಿ ಐದು ವರ್ಷದ ಡಕೌಟ್ ಚಾಲೆಂಜ್ ಗೆದ್ದಿದ್ದಾರೆ ಎಂದು ಫ್ಯಾನ್ಸ್​ ಕಾಲೆಳೆಯುತ್ತಿದ್ದಾರೆ.

ಇನ್ನು ಇಷ್ಟಕ್ಕೆ ಸುಮ್ಮನಾಗದ ಫ್ಯಾನ್ಸ್​​, ಎಬಿಡಿ ಐಪಿಎಲ್​ ಆರಂಭಕ್ಕೂ ಮುನ್ನ ಕೊಹ್ಲಿ ಈ ಸಲ 600 ರನ್​ ಸಿಡಿಸಲಿದ್ದಾರೆ ಎಂದಿದ್ರು. ಸದ್ಯ ಅದೇ ಮಾತು ಫ್ಯಾನ್ಸ್​ಗೆ ಅಸ್ತ್ರವಾಗಿದ್ದು, ಎಬಿಡಿ ನೀವು ಜೋಕ್ಸ್ ಮಾಡ್ಬೇಡಿ ಎನ್ನುವ ಮೂಲಕ ಕೊಹ್ಲಿಯನ್ನ ಕಿಚಾಯಿಸಿದ್ದಾರೆ.

ಪ್ರಸಕ್ತ ಐಪಿಎಲ್​​ನಲ್ಲಿ ಕೊಹ್ಲಿ ದಯನೀಯ ವೈಫಲ್ಯ ಅನುಭವಿಸ್ತಿದ್ದಾರೆ. ಈವರೆಗೆ ಆಡಿದ 8 ಪಂದ್ಯಗಳಿಂದ ಬರೀ 119 ರನ್​ ಗಳಿಸಿದ್ದಾರೆ. 2 ಬಾರಿ ಡಕೌಟ್ ಆದ್ರೆ 4 ಬಾರಿ ಎರಡಂಕಿ ದಾಟಿದ್ದಾರೆ. ಇನ್ನು 48 ಇವರ ಬ್ಯಾಟ್​​ನಿಂದ ಮೂಡಿ ಬಂದ ಈವರೆಗಿನ  ಬೆಸ್ಟ್ ಸ್ಕೋರ್ ಆಗಿದೆ.

- Advertisement -
spot_img

Latest News

error: Content is protected !!