Wednesday, June 3, 2026
Homeತಾಜಾ ಸುದ್ದಿಬಿಜೆಪಿ ನಾಯಕಿ, ನಟಿ ಖುಷ್ಬೂ ಪ್ರಯಾಣಿಸುತ್ತಿದ್ದ ಕಾರು ಅಪಘಾತ

ಬಿಜೆಪಿ ನಾಯಕಿ, ನಟಿ ಖುಷ್ಬೂ ಪ್ರಯಾಣಿಸುತ್ತಿದ್ದ ಕಾರು ಅಪಘಾತ

- Advertisement -
- Advertisement -

ಚೆನ್ನೈ: ತಮಿಳುನಾಡಿನ ಕಡಲೂರಿಗೆ ಹೋಗುತ್ತಿದ್ದ ವೇಳೆ ನಟಿ ಖುಷ್ಬೂ ಕಾರಿಗೆ ಟ್ಯಾಂಕರ್​ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್, ನಟಿ ಹಾಗೂ BJP ನಾಯಕಿ ಖುಷ್ಬೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಆದರೆ, ಅವಘಡದಲ್ಲಿ ನಟಿ ಕಾರಿನ ಬಾಗಿಲು ಸಂಪೂರ್ಣ ನಜ್ಜುಗುಜ್ಜಾಗಿದೆ. ಖುಷ್ಬೂ‌ ಬಳಿಕ ಬೇರೆ ಕಾರಿನಲ್ಲಿ ಕಡಲೂರಿಗೆ ಪ್ರಯಾಣ ಮುಂದುವರಿಸಿದರು. ನಟಿ ಬಿಜೆಪಿ ವೇಲ ಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುತ್ತಿದ್ದರು ಎಂದು ಹೇಳಲಾಗಿದೆ.

“ನನ್ನ ಪತಿ ಸುಬ್ರಹ್ಮಣ್ಯ ಸ್ವಾಮಿಯ ಆರಾಧಕ. ಅವನೇ ನನ್ನನ್ನು ರಕ್ಷಿಸಿದ್ದಾನೆ. ನಿಮ್ಮೆಲ್ಲರ ಅಶೀರ್ವಾದ ಹಾಗೂ ದೇವರ ಕೃಪೆಯಿಂದ ನಾನು ಸುರಕ್ಷಿತವಾಗಿದ್ದೇನೆ. ಕಡೂರು ಕಡೆಗೆ ನನ್ನ ಪ್ರಯಾಣ ಮುಂದುವರಿಸುತ್ತಿದ್ದೇನೆ” ಎಂದು ಟ್ವೀಟ್ ಮಾಡಿದ್ದಾರೆ.

- Advertisement -

Latest News

error: Content is protected !!