Sunday, June 7, 2026
Homeತಾಜಾ ಸುದ್ದಿಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ- ನಾಲ್ವರು ಆರೋಪಿಗಳ ಬಂಧನ

ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ- ನಾಲ್ವರು ಆರೋಪಿಗಳ ಬಂಧನ

- Advertisement -
- Advertisement -

ಕೋಲಾರ:ಇಲ್ಲಿನ ಕೋಲಾರದ ಬೇತಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಹಂಗಳ ಗ್ರಾಮದಲ್ಲಿ ನಾಲ್ವರು ಯುವಕರು ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.ಈ ಗ್ರಾಮದ ಹರೀಶ್ (28), ರಘು (23), ಮಹೇಶ್ (19) ಹಾಗೂ ಜಗದೀಶ್ (18) ಅತ್ಯಾಚಾರವೆಸಗಿದ ಕಾಮುಕರು.

ಹಂಗಳ ಗ್ರಾಮದ 13 ವರ್ಷದ ಬಾಲಕಿಯನ್ನು ಭಾನುವಾರ ರಾತ್ರಿ ಬಾಲಕಿ ಮನೆಯಿಂದ ಹೊರಗೆ ಬಂದಿದ್ದ ವೇಳೆ ಅಪಹರಿಸಿದ್ದಾರೆ. ನಾಲ್ವರು ಯುವಕರು ಗ್ರಾಮದಲ್ಲೇ ಇದ್ದ ಹಳೆ ಮನೆಯಲ್ಲಿ ಕೂಡಿ ಹಾಕಿ ಅತ್ಯಾಚಾರವೆಸಗಿದ್ದಾರೆ. ಘಟನೆ ತಿಳಿದ ಬಾಲಕಿ ತಂದೆ ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.

- Advertisement -

Latest News

error: Content is protected !!