Thursday, June 25, 2026
Homeತಾಜಾ ಸುದ್ದಿರಾಜ್ಯ ಸರ್ಕಾರಿ ನೌಕರರಿಗೆ ತಿಂಗಳ‌ ಮೊದಲನೇ ಶನಿವಾರ ಖಾದಿ ಉಡುಪು ಕಡ್ಡಾಯ; ರಾಜ್ಯ ಸರ್ಕಾರದಿಂದ ನಿರ್ಧಾರ

ರಾಜ್ಯ ಸರ್ಕಾರಿ ನೌಕರರಿಗೆ ತಿಂಗಳ‌ ಮೊದಲನೇ ಶನಿವಾರ ಖಾದಿ ಉಡುಪು ಕಡ್ಡಾಯ; ರಾಜ್ಯ ಸರ್ಕಾರದಿಂದ ನಿರ್ಧಾರ

- Advertisement -
- Advertisement -

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಖಾದಿ ಬಟ್ಟೆ‌ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ತೀರ್ಮಾನ ತೆಗೆದುಕೊಂಡಿದೆ.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದ್ದು, ಪ್ರತಿ ತಿಂಗಳ ಮೊದಲ ಶನಿವಾರ ಖಾದಿ ಬಟ್ಟೆ ನೌಕರರು ಧರಿಸಲು ನಿರ್ಧಾರ ಕೈಗೊಳ್ಳಲಾಗಿದೆ.

ರಾಜ್ಯ ಸರ್ಕಾರಿ ನೌಕರರು ಸರ್ಕಾರಿ ಸ್ವಾಮ್ಯದ ಖಾದಿ ಗ್ರಾಮೋದ್ಯೋಗ ಮಳಿಗೆಗಳಲ್ಲಿಯೇ ಖಾದಿ ಬಟ್ಟೆ ಖರೀದಿಸಬೇಕಾಗಿದ್ದು, ಖಾದಿ ಗ್ರಾಮೋದ್ಯೋಗ ಮಂಡಳಿ ಈಗ ನೀಡುತ್ತಿರುವ ರಿಯಾಯಿತಿಗಿಂತ 5% ಹೆಚ್ಚು ರಿಯಾಯಿತಿ ನೀಡುವಂತೆ ಸೂಚಿಸಲಾಗಿದೆ.

ಪುರುಷ ನೌಕರರು ಖಾದಿ ಬಟ್ಟೆಯ ಪ್ಯಾಂಟ್ ಶರ್ಟ್ ಮತ್ತು ಓವರ್ ಕೋಟ್ ಮತ್ತು ಮಹಿಳಾ ನೌಕರರು ಸಿಲ್ಕ್ ಸೀರೆ, ಚೂಡಿದಾರ್ ಧರಿಸಲು ಸೂಚನೆ ನೀಡಲಾಗಿದೆ.ಖಾದಿ ಉಡುಪು ಧರಿಸುವ ಯೋಜನೆಗೆ ಏಪ್ರಿಲ್ 24 ರಂದು ರಾಜ್ಯ ಸರ್ಕಾರದಿಂದ ಚಾಲನೆ ದೊರೆಯಲಿದೆ.

- Advertisement -

Latest News

error: Content is protected !!