Wednesday, June 24, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಪಾಂಗಳದಲ್ಲಿ ಮನೆಯಲ್ಲಿ ಯಾರು ಇಲ್ಲದ ವೇಳೆ ಕಳ್ಳತನ

ಬೆಳ್ತಂಗಡಿ : ಪಾಂಗಳದಲ್ಲಿ ಮನೆಯಲ್ಲಿ ಯಾರು ಇಲ್ಲದ ವೇಳೆ ಕಳ್ಳತನ

- Advertisement -
- Advertisement -

ಬೆಳ್ತಂಗಡಿ : ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಯೊಳಗೆ ನುಗ್ಗಿದ ಕಳ್ಳರು ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ  ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಪಾಂಗಳದಲ್ಲಿ ನಡೆದಿದೆ.

ಇಲ್ಲಿನ ಲಕ್ಷ್ಮೀ ನಿವಾಸದ ಬಾಲಕೃಷ್ಣ ಗೌಡರ ಮನೆಯಲ್ಲಿ  ಜ.29 ರಂದು ಬೆಳಗ್ಗೆ 9:30 ರಿಂದ ಸಂಜೆ 4 ಗಂಟೆ ಒಳಗಡೆ ಮನೆಯಲ್ಲಿ ಯಾರು ಇಲ್ಲದ ವೇಳೆಗೆ ಕಳ್ಳತನ ನಡೆದಿದೆ. ಮನೆಯೊಳಗಿದ್ದ 4 ಗ್ರಾಂ ಕಿವಿಯೋಲೆ, 2 ಸಾವಿರ ಮೌಲ್ಯದ 2 ಜೊತೆ ಬೆಳ್ಳಿಯ ಕಾಲುಗೆಜ್ಜೆ, 5,500 ರೂಪಾಯಿ ನಗದು ಸೇರಿ ಒಟ್ಟು 47,500 ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿರುವ ಬಗ್ಗೆ ಮನೆ ಮಾಲೀಕ ಬಾಲಕೃಷ್ಣ ಗೌಡ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ.ಬಿಎಸ್ , ಧರ್ಮಸ್ಥಳ ಸಬ್ ಇನ್ಸ್ಪೆಕ್ಟರ್ ಸಮರ್ಥ್ ಆರ್ ಗಾಣಿಗೇರ ಮತ್ತು ತಂಡ, ಮಂಗಳೂರು ಬೆರಳಚ್ಚು ತಜ್ಞರು, ಪುತ್ತೂರು ಸೊಕೋ ತಂಡ, ಮಂಗಳೂರು ಶ್ವಾನ ದಳ ಬಂದು ಪರಿಶೀಲನೆ ನಡೆಸಿದ್ದಾರೆ

- Advertisement -

Latest News

error: Content is protected !!