- Advertisement -
![]()
- Advertisement -
ಮಂಗಳೂರು: ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ಕೆಎಎಸ್ ಅಧಿಕಾರಿ ಅಮೃತಾ ಗೌಡ ಅವರಿಗೆ ಧಮಕಿ ಹಾಕಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆರೋಪಿ ರಾಜೀವ್ ಗೌಡ ಅವರನ್ನು ಮಂಗಳೂರಿಗೆ ಕರೆತಂದು ಶಿಡ್ಲಘಟ್ಟ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ.
ಆರೋಪಿ ರಾಜೀವ್ ಗೌಡ ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲ್ಪಟ್ಟಿರುವ ಹಿನ್ನಲೆಯಲ್ಲಿ ಚಿಂತಾಮಣಿಯ ಕಾರಾಗೃಹದಿಂದ ಮಂಗಳೂರಿಗೆ ಪೊಲೀಸರು ಕರೆತಂದು ರಾಜೀವ್ ಗೌಡ ಆಶ್ರಯ ಪಡೆದಿದ್ದ ಉದ್ಯಮಿ ಮೈಕಲ್ ಗೆ ಸೇರಿದ ಫಾರ್ಮ್ ಹೌಸ್ ನಲ್ಲಿ ಮಹಜರು ನಡೆಸಿದ್ದಾರೆ.
ಪ್ರಕರಣದ ತನಿಖಾಧಿಕಾರಿಯಾಗಿರುವ ಶಿಡ್ಲಘಟ್ಟ ವೃತ್ತ ನಿರೀಕ್ಷಕ ಆನಂದ್ ಕುಮಾರ್ ನೇತೃತ್ವದಲ್ಲಿ ಮಂಗಳೂರಿನ ಪಚ್ಚನಾಡಿಯಲ್ಲಿರುವ ಜೇಕ್ ಡಿಸೈನ್ ಸ್ಟೋರ್ ನಲ್ಲಿ ಪರಿಶೀಲನೆ ನಡೆಸಲಾಗಿದೆ.
ಕೇರಳಕ್ಕೆ ಪರಾರಿಯಾಗುವ ಮುನ್ನ ರಾಜೀವ್ ಗೌಡಗೆ ಉದ್ಯಮಿ ಮೈಕಲ್ ಒಡೆತನದ ಫಾರ್ಮ್ ಹೌಸ್ ನಲ್ಲಿರುವ ಆಶ್ರಯ ನೀಡಲಾಗಿತ್ತು.
- Advertisement -


