Wednesday, June 24, 2026
Homeತಾಜಾ ಸುದ್ದಿಹೆಜಮಾಡಿ ಟೋಲ್ ಬಳಿ ಹುಚ್ಚಾಟ ಮೆರೆದಿದ್ದ ಕೇರಳ ವಿದ್ಯಾರ್ಥಿಗಳ ಪ್ರವಾಸಿ ಬಸ್ ವಿಜಯನಗರ ಜಿಲ್ಲೆಯಲ್ಲಿ ಪಲ್ಟಿ

ಹೆಜಮಾಡಿ ಟೋಲ್ ಬಳಿ ಹುಚ್ಚಾಟ ಮೆರೆದಿದ್ದ ಕೇರಳ ವಿದ್ಯಾರ್ಥಿಗಳ ಪ್ರವಾಸಿ ಬಸ್ ವಿಜಯನಗರ ಜಿಲ್ಲೆಯಲ್ಲಿ ಪಲ್ಟಿ

- Advertisement -
- Advertisement -

ಹೊಸಪೇಟೆ: ಕಾಪು ತಾಲೂಕಿನ ಹೆಜಮಾಡಿ ಟೋಲ್ ಬಳಿ ರಸ್ತೆಯಲ್ಲಿ ಬಸ್ ನಿಲ್ಲಿಸಿ ಪಟಾಕಿ ಸಿಡಿಸಿ ಹುಚ್ಚಾಟ ಮೆರೆದಿದ್ದ ಕೇರಳದ ವಿದ್ಯಾರ್ಥಿಗಳಿದ್ದ ಪ್ರವಾಸಿ ಬಸ್ ವಿಜಯನಗರ ಜಿಲ್ಲೆಯ ಕೂಡ್ಲಿಗಿಯಲ್ಲಿ ಪಲ್ಟಿ ಹೊಡೆದಿದೆ.

ಹಂಪಿಗೆ ತೆರಳುತ್ತಿದ್ದ ವೇಳೆ ಕೂಡ್ಲಿಗಿ ತಾಲೂಕಿನ ಅಮ್ಮನ ಕೇರಿ ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.

ಶಿಕ್ಷಕಿ ಸೇರಿದಂತೆ ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳ್ಳಾರಿಯ ಬಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿದೆ.

ಕೇರಳದಿಂದ ಪ್ರವಾಸಕ್ಕೆಂದು ಬಸ್ ನಲ್ಲಿ ಬಂದಿದ್ದ ವಿದ್ಯಾರ್ಥಿಗಳು ನಿನ್ನೆ ರಾತ್ರಿ ಹೆಜಮಾಡಿ ಟೋಲ್ ಗೇಟ್ ಬಳಿ ರಸ್ತೆಯಲ್ಲಿ ಬಸ್ ನಿಲ್ಲಿಸಿ ಪಟಾಕಿ ಸಿಡಿಸಿ ನೃತ್ಯ ಮಾಡಿ ಹುಚ್ಚಾಟ ಮೆರೆದಿದ್ದರು.

ಕೇರಳದಿಂದ ಉಡುಪಿಗೆ ಮಿನಿ ಬಸ್ ನಲ್ಲಿ ಪ್ರವಾಸ ಬಂದಿದ್ದ ವಿದ್ಯಾರ್ಥಿಗಳು ಬಳಿಕ ಉಡುಪಿಯಿಂದ ಹಂಪಿಗೆ ತೆರಳಿದ್ದರು.

- Advertisement -

Latest News

error: Content is protected !!