- Advertisement -
![]()
- Advertisement -
ಬಂಟ್ವಾಳ; ಅನುಚಿತವಾಗಿ ವರ್ತಿಸಿ ಮಾವ ನನ್ನ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆಯೊಬ್ಬರು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದಿನಾಂಕ 02.02.2026 ರಂದು ರಾತ್ರಿ 7.30 ಗಂಟೆಗೆ ಮಹಿಳೆ ಮನೆಯ ಕೋಣೆಯಲ್ಲಿದ್ದಾಗ, ಅವರ ಮಾವ ಅಕ್ರಮವಾಗಿ ಪ್ರವೇಶಿಸಿ ಅನುಚಿತವಾಗಿ ವರ್ತಿಸಿ, ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ. ಅಲ್ಲದೇ ಮಹಿಳೆ ತಪ್ಪಿಸಿಕೊಂಡು ಹೊರಗೆ ಬಂದಾಗ ಗಂಡನು ಸಹ ತಂದೆಯ ಪರವಾಗಿ ವರ್ತಿಸಿ ಚಿಕಿತ್ಸೆ ಕೊಡಿಸಲು ನಿರಾಕರಿಸಿರುತ್ತಾರೆ. ನಂತರ ಮಹಿಳೆಯ ತಂದೆ–ತಾಯಿ ಅವರನ್ನು ಸಂಪಾಜೆ ಸರಕಾರಿ ಆಸ್ಪತ್ರೆಗೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಮಹಿಳೆ ತಾನು ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಘಟಣಾ ಸ್ಥಳದ ಆಧಾರದಲ್ಲಿ ಸುಳ್ಯ ಠಾಣೆಗೆ ಪ್ರಕರಣವನ್ನು ವರ್ಗಾಯಿಸಿ ತನಿಖೆ ನಡೆಸಲಾಗುತ್ತಿದೆ.
- Advertisement -


