Friday, August 28, 2026
Homeತಾಜಾ ಸುದ್ದಿಇಂದು ಸಂಜೆ ಕೇರಳಂ ಹೊಸ ಸಿಎಂ ಹೆಸರು ಘೋಷಣೆ ಸಾಧ್ಯತೆ

ಇಂದು ಸಂಜೆ ಕೇರಳಂ ಹೊಸ ಸಿಎಂ ಹೆಸರು ಘೋಷಣೆ ಸಾಧ್ಯತೆ

- Advertisement -
- Advertisement -

ತಿರುವನಂತಪುರಂ: ಕೇರಳಂನ ಮುಂದಿನ ಮುಖ್ಯಮಂತ್ರಿ ಹೆಸರು ಇಂದು ಸಂಜೆ ಘೋಷಣೆಯಾಗುವ ನಿರೀಕ್ಷೆಯಿದೆ. ಸಂಜೆ ತಿರುವನಂತಪುರಂನ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ.

ಇಂದು ಸಂಜೆ 4 ಗಂಟೆಯ ವೇಳೆಗೆ ಎಐಸಿಸಿ ವೀಕ್ಷಕರಾದ ಮುಕುಲ್ ವಾಸ್ನಿಕ್, ಅಜಯ್ ಮಾಕೇನ್ ಮತ್ತು ಕಾಂಗ್ರೇಸ್ ಕೇರಳ ಉಸ್ತುವಾರಿ ದೀಪ ದಾಸ್ ಮುನ್ಶಿ ತಿರುವನಂತಪುರಂ ತಲುಪಲಿದ್ದು, ಶಾಸಕಾಂಗ ಪಕ್ಷದ ಸಭೆಯಲ್ಲಿ ಹೊಸ ನಾಯಕನ ಹೆಸರು ಘೋಷಣೆ ಮಾಡಲಿದ್ದಾರೆ.

ನಿನ್ನೆ ಸಂಜೆ ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಅಂತಿಮಗೊಂಡಿದೆ ಎಂದು ಹೇಳಲಾಗಿದೆ.

ಸದ್ಯ ವಿ.ಡಿ. ಸತೀಸನ್ ಮತ್ತು ಕೆ.ಸಿ. ವೇಣುಗೋಪಾಲ್ ನಡುವೆ ನೇರ ಸ್ಫರ್ಧೆ ಏರ್ಪಟ್ಟಿದೆ. ಇಂದು ಹೆಸರು ಘೋಷಣೆಯಾದರೆ ಹತ್ತು ದಿನಗಳ ಡೆಡ್ ಲಾಕ್ ಅಂತ್ಯಗೊಳ್ಳಲಿದೆ.

- Advertisement -

Latest News

error: Content is protected !!