Wednesday, June 3, 2026
Homeಕರಾವಳಿಉಡುಪಿಕಾಸರಗೋಡು: ಪೊಲೀಸ್ ತನಿಖೆಯ ವೇಳೆ ಸಮುದ್ರಕ್ಕೆ ಹಾರಿದ ಆರೋಪಿಯ ಮೃತದೇಹ ಸಿಕ್ಕಿದ್ದೆಲ್ಲಿ ಗೊತ್ತೇ ?

ಕಾಸರಗೋಡು: ಪೊಲೀಸ್ ತನಿಖೆಯ ವೇಳೆ ಸಮುದ್ರಕ್ಕೆ ಹಾರಿದ ಆರೋಪಿಯ ಮೃತದೇಹ ಸಿಕ್ಕಿದ್ದೆಲ್ಲಿ ಗೊತ್ತೇ ?

- Advertisement -
- Advertisement -

ಕಾಸರಗೋಡು: ಶೌಚಾಲಯದಲ್ಲಿ ಅಪ್ರಾಪ್ತ ಬಾಲಕಿಯ ದೃಶ್ಯವನ್ನು. ಮೊಬೈಲ್ ನಲ್ಲಿ ಚಿತ್ರೀಕರಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೋಕ್ಸೋ ಕಾಯ್ದೆಯಂತೆ ಬಂಧಿತನಾಗಿ ಕಾಸರಗೋಡು ಬಂದರು ಸಮೀಪ ತನಿಖೆಯ ವೇಳೆ ಪೊಲೀಸರ ಕಣ್ಣೆದುರಲ್ಲೇ ಸಮುದ್ರಕ್ಕೆ ಹಾರಿದ್ದ ಆರೋಪಿಯ ಮೃತದೇಹ ಉಡುಪಿ ಸಮೀಪ ಕಡಲ ಕಿನಾರೆಯಲ್ಲಿ ಇಂದು ಬೆಳಿಗ್ಗೆ ಪತ್ತೆಯಾಗಿದೆ.

ಆರೋಪಿ ಕೂಡ್ಲು ಕಾಳ್ಯಾ೦ಗಾಡ್‌ನ ಮಹೇಶ್ ( 28), ಅಪ್ರಾಪ್ತ ಬಾಲಕಿಯ ದೃಶ್ಯವನ್ನು ಚಿತ್ರೀಕರಿಸಿದ ಮೊಬೈಲ್ ನ್ನು ಕಾಸರಗೋಡು ಬಂದರು ಸಮೀಪ ಕಲ್ಲಿನೆಡೆಯಲ್ಲಿ ಅಡಗಿಸಿಟ್ಟಿದ್ದ. ಈ ಕುರಿತು ಮಾಹಿತಿ ಕಲೆಹಾಕಲು ಜುಲೈ 22ರಂದು ಬಂಧಿತ ಮಹೇಶ್ ನನ್ನು ಕಾಸರಗೋಡು ಬಂದರು ಬಳಿಗೆ ಕರೆ ತರಲಾಗಿತ್ತು. ಈ ಸಂದರ್ಭದಲ್ಲಿ ಪೋಲೀಸರ ಎದುರಲ್ಲೇ ಸಮುದ್ರಕ್ಕೆ ಹಾರಿ ನಾಪತ್ತೆಯಾಗಿದ್ದನು. ಕೂಡಲೇ ಈತನ್ನು ರಕ್ಷಿಸಲು ಜೊತೆಗಿದ್ದ ಪೊಲೀಸರು ಯತ್ನಿಸಿದರೂ ಪ್ರಯೋಜನವಾಗಲಿಲ್ಲ.

ಮಹೇಶ್ ಗಾಗಿ ಮುಳುಗು ತಜ್ಞರು, ಕರಾವಳಿ ರಕ್ಷಣಾ ಪಡೆ ಸಿಬಂದಿ ಗಳು ಹಾಗೂ ಸ್ಥಳಿಯರು ಶೋಧ ನಡೆಸಿದರೂ ಪತ್ತೆಯಾಗಿರಲಿಲ್ಲ. ಈ ನಡುವೆ ಇಂದು ಬೆಳಿಗ್ಗೆ ಉಡುಪಿ ಸಮೀಪದ ಕಡಲ ಕಿನಾರೆಯಲ್ಲಿ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಬಗ್ಗೆ ಉಡುಪಿ ಪೊಲೀಸರು ನೀಡಿದ ಮಾಹಿತಿಯಂತೆ ಕಾಸರಗೋಡು ಪೊಲೀಸರು ತೆರಳಿದ್ದಾರೆ. ಈತನ ವಸ್ತ್ರ ಹಾಗೂ ಕೈಕೋಳ ದಿಂದ ಮೃತದೇಹ ಮಹೇಶ್ ನದ್ದೆಂದು ಗುರುತಿಸಲಾಗಿದೆ.

- Advertisement -

Latest News

error: Content is protected !!