- Advertisement -


- Advertisement -
ಕಾಸರಗೋಡು: ಸ್ನ್ಯಾಪ್‌ಚಾಟ್ ಮೂಲಕ ಪರಿಚಯಿಸಿಕೊಂಡು 14 ಮತ್ತು 16 ವರ್ಷದ ಇಬ್ಬರು ಶಾಲಾ ಬಾಲಕಿಯರನ್ನು ಮಂಗಳೂರು ಸಮೀಪದ ಉಳ್ಳಾಲದ ಲಾಡ್ಜ್‌ಗೆ ಕರೆದೊಯ್ದಿದ್ದ ಇಬ್ಬರು ಯುವಕರನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ.
ಮಂಜೇಶ್ವರ ಮೂಲದ ರಿಜ್ವಾನ್ (23) ಹಾಗೂ ಮುಹಮ್ಮದ್ ಸಾದ್ (19) ಬಂಧಿತ ಆರೋಪಿಗಳು. ಇವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಆಗಸ್ಟ್ 16ರಂದು ಕಾರಿನಲ್ಲಿ ಬಂದ ಆರೋಪಿಗಳು, ಸ್ನೇಹಿತರನ್ನು ಭೇಟಿಯಾಗುವುದಾಗಿ ಮನೆಗೆ ಹೇಳಿ ಬಂದಿದ್ದ ಬಾಲಕಿಯರನ್ನು ಕಾಂಞಂಗಾಡ್‌ನಿಂದ ಕರೆದೊಯ್ದಿದ್ದರು. ಸಂಜೆಯಾದರೂ ಮಕ್ಕಳು ಮನೆಗೆ ಬಾರದಿದ್ದಾಗ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.
ಬಾಲಕಿಯರ ಮೊಬೈಲ್ ಫೋನ್ ಟವರ್ ಲೊಕೇಶನ್ ಆಧರಿಸಿ ತನಿಖೆ ನಡೆಸಿದ ಪೊಲೀಸರು, ಉಳ್ಳಾಲದ ಲಾಡ್ಜ್ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಾಲಕಿಯರ ಹೇಳಿಕೆಯ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಲಾಗಿದೆ.
- Advertisement -


