Saturday, November 7, 2026
Homeಕರಾವಳಿಸಿಡಿಲು ಬಡಿದು ಮನೆಗೆ ಭಾರೀ ಹಾನಿ; ಲಕ್ಷಾಂತರ ರೂ. ನಷ್ಟ

ಸಿಡಿಲು ಬಡಿದು ಮನೆಗೆ ಭಾರೀ ಹಾನಿ; ಲಕ್ಷಾಂತರ ರೂ. ನಷ್ಟ

- Advertisement -
- Advertisement -

ಕಾಸರಗೋಡು ಜಿಲ್ಲೆಯ ಕುಂಬಳೆಯ ದೇವಿನಗರದಲ್ಲಿ ಸಿಡಿಲು ಬಡಿದು ಮನೆಯೊಂದಕ್ಕೆ ಭಾರೀ ಹಾನಿಯಾಗಿದೆ. ದೇವಿನಗರ ನಿವಾಸಿ ರಾಜನ್ ಅವರ ಮನೆಯಲ್ಲಿ ಸಂಜೆ ಸುಮಾರು 6 ಗಂಟೆಗೆ ಈ ಘಟನೆ ನಡೆದಿದೆ.

ಸಿಡಿಲಿನ ತೀವ್ರತೆಗೆ ಮನೆಯ ವಿದ್ಯುತ್ ವಯರಿಂಗ್ ಸಂಪೂರ್ಣ ಸುಟ್ಟುಹೋಗಿದ್ದು, ಸ್ವಿಚ್ ಬೋರ್ಡ್‌ಗಳು ಒಡೆದು ಚದುರಿವೆ. ಮನೆಯ ಕಾಂಕ್ರೀಟ್ ಗೋಡೆಗಳಲ್ಲಿಯೂ ಬಿರುಕುಗಳು ಕಾಣಿಸಿಕೊಂಡಿವೆ. ಎರಡನೇ ಮಹಡಿಯ ಕೋಣೆಗಳಿಗೆ ಸಿಡಿಲು ಬಡಿದ ಪರಿಣಾಮ ಟಿ.ವಿ. ಸೇರಿದಂತೆ ಹಲವು ಎಲೆಕ್ಟ್ರಾನಿಕ್ ಉಪಕರಣಗಳು ಹಾನಿಗೊಳಗಾಗಿವೆ.

ಘಟನೆಯಿಂದ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಘಟನೆ ನಡೆದ ಸಂದರ್ಭದಲ್ಲಿ ರಾಜನ್, ಅವರ ಪತ್ನಿ ಸುಲೋಚನಾ ಹಾಗೂ ಮಕ್ಕಳಾದ ದೀಪಕ್ ಮತ್ತು ದೀಕ್ಷಿತ್ ಮನೆಯೊಳಗೇ ಇದ್ದರು. ಆದರೆ, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

- Advertisement -

Latest News

error: Content is protected !!