Tuesday, August 18, 2026
Homeಕರಾವಳಿಮಂಗಳೂರುಬೆಳ್ತಂಗಡಿ: ಶಾಸಕ ಹರೀಶ್ ಪೂಂಜ ಅವರ ಹುಟ್ಟುಹಬ್ಬದ ಪ್ರಯುಕ್ತ ಮನೆ ನಿರ್ಮಾಣಕ್ಕೆ ಸಂಕಲ್ಪ

ಬೆಳ್ತಂಗಡಿ: ಶಾಸಕ ಹರೀಶ್ ಪೂಂಜ ಅವರ ಹುಟ್ಟುಹಬ್ಬದ ಪ್ರಯುಕ್ತ ಮನೆ ನಿರ್ಮಾಣಕ್ಕೆ ಸಂಕಲ್ಪ

- Advertisement -
- Advertisement -

ಬೆಳ್ತಂಗಡಿ: ಸಾಯಿ ರಾಮ್ ಫ್ರೆಂಡ್ಸ್ ಶಕ್ತಿನಗರ, ಗುರುವಾಯನಕೆರೆ ಇವರ ವತಿಯಿಂದ ನಮ್ಮೆಲ್ಲರ ಹೆಮ್ಮೆಯ ಶಾಸಕರಾದ ಹರೀಶ್ ಪೂಂಜ ಅವರ ಹುಟ್ಟುಹಬ್ಬದ ಪ್ರಯುಕ್ತ ಓಡಿಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಆ.17 ರಂದು ವಿಶೇಷ ಪೂಜೆ ಸಲ್ಲಿಸಲಾಯಿತು.

ಶಾಸಕರ ಹುಟ್ಟುಹಬ್ಬದ ಪ್ರಯುಕ್ತ ಈ ಬಾರಿ ಕುವೆಟ್ಟು ಗ್ರಾಮದ ಬರಾಯ ನಿವಾಸಿ ಕಮಲ ಅವರಿಗೆ ಶಾಸಕರ ಸಹಕಾರದೊಂದಿಗೆ, ಸಾಯಿ ರಾಮ್ ಫ್ರೆಂಡ್ಸ್ ಹಾಗೂ ದಾನಿಗಳ ನೆರವಿನಿಂದ ಮನೆ ನಿರ್ಮಿಸಿಕೊಡುವ ಸಂಕಲ್ಪದೊಂದಿಗೆ ದೇವರಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಯುವಮೋರ್ಚಾ ಅಧ್ಯಕ್ಷರಾದ ಶಶಿರಾಜ್ ಶೆಟ್ಟಿ ಗುರುವಾಯನಕೆರೆ, ಸಾಯಿ ರಾಮ್ ಫ್ರೆಂಡ್ಸ್ ಶಕ್ತಿನಗರದ ಅಧ್ಯಕ್ಷರಾದ ಪ್ರದೀಪ್ ಶೆಟ್ಟಿ ಶಕ್ತಿನಗರ, ದೇವಿಪ್ರಸಾದ್ ಆಚಾರ್ಯ ಶಕ್ತಿನಗರ, ವಿತೇಶ್ ಪಾಡ್ಯರ್, ಪ್ರದೀಪ್ ಶೆಟ್ಟಿ ನವಶಕ್ತಿ, ನಿಮಿತ್ ಪೂಜಾರಿ ಪಾಡ್ಯರ್, ಪವನ್ ಬಂಗೇರ ಬರಾಯ, ರಮೇಶ್ ಬರಾಯ ಹಾಗೂ ಸಾಯಿ ರಾಮ್ ಫ್ರೆಂಡ್ಸ್ ಶಕ್ತಿನಗರ ತಂಡದ ಸದಸ್ಯರು ಉಪಸ್ಥಿತರಿದ್ದರು.

- Advertisement -

Latest News

error: Content is protected !!