Wednesday, June 3, 2026
Homeಕರಾವಳಿವೇಣೂರು: ಭೂಮಿ ಪೂಜೆಯ ಸಂಭ್ರಮಾಚರಣೆ ಕರ ಸೇವಕರಿಗೆ ಸನ್ಮಾನ

ವೇಣೂರು: ಭೂಮಿ ಪೂಜೆಯ ಸಂಭ್ರಮಾಚರಣೆ ಕರ ಸೇವಕರಿಗೆ ಸನ್ಮಾನ

- Advertisement -
- Advertisement -

ಸಾವ್ಯ- ಆಗಸ್ಟ್ 05: ಹಿಂದು ಜಾಗರಣ ವೇದಿಕೆ ವೇಣೂರು ಪ್ರಖಂಡ, ವಿ.ಹಿಂ.ಪ ಭಜರಂಗದಳದ ಸಂಯುಕ್ತ ಆಶ್ರಯದಲ್ಲಿ ಅಯ್ಯಪ್ಪ ಸ್ವಾಮಿ ಭಜನ ಮಂದಿರ ಸಾವ್ಯದಲ್ಲಿ ಅಯೋಧ್ಯೆಯ ಭೂಮಿ ಪೂಜೆಯ ಸಂಭ್ರಮಾಚರಣೆಯನ್ನು 1008 ದೀಪ ಬೆಳಗಿಸುವ ಮೂಲಕ ಆಚರಿಸಲಾಯಿತು.

ಅಯೋಧ್ಯೆಯ ಕರಸೇವೆಗೆ ಸಾವ್ಯ ಗ್ರಾಮದಿಂದ ತೆರಳಿದ್ದ ಬಾಲಕೃಷ್ಣ ಪೆರಾಡಿ ಮತ್ತು ದಿ. ಬಿರ್ಮಾಣ ಪೂಜರಿಯವರ ಧರ್ಮ ಪತ್ನಿ ಶ್ರೀಮತಿ ಗಿರಿಜಾ ರವರನ್ನು ಸನ್ಮಾನಿಸಲಾಯಿತು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಪುತ್ತೂರು ಜಿಲ್ಲಾ ಸಹ ಸೇವಾ ಪ್ರಮುಖ್ ಮತ್ತು ಹಿಂ.ಜಾ.ವೇ. ಯ ಜಿಲ್ಲಾ ಸಂಪರ್ಕ್ ಪ್ರಮುಖ್ ಆಗಿರುವ ನರಸಿಂಹ ಬಂಟ್ವಾಳ್ ಬೌದ್ದಿಕ್ ನಡೆಸಿ ಕೊಟ್ಟರು.

ಈ ಸಂದರ್ಭದಲ್ಲಿ ಜಿಲ್ಲಾ ಹಿಂದು ಸಂಯೋಜಕ್ ಪ್ರಶಾಂತ್ ಬಂಟ್ವಾಳ , ಹಿಂ.ಜಾ.ವೇ ವೇಣೂರು ಪ್ರಖಂಡದ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಸಾವ್ಯ, ಕಾರ್ಯದರ್ಶಿ ನಂದೀಶ್ ಗುಜ್ಜೋಟ್ಟು ಸೇರಿದಂತೆ ಸಂಘಟನೆಯ ಮುಖಂಡರು ಊರವರು ಉಪಸ್ಥಿತರಿದ್ದರು.

- Advertisement -

Latest News

error: Content is protected !!