Friday, April 19, 2024
Homeತಾಜಾ ಸುದ್ದಿರಾಜ್ಯ ಸರ್ಕಾರದಿಂದ ಹೊಸ ಮಾರ್ಗಸೂಚಿ‌ ಬಿಡುಗಡೆ: ಯಾವ ಝೋನ್‌ನಲ್ಲಿ ಏನಿರುತ್ತೆ? ಏನಿರಲ್ಲ?

ರಾಜ್ಯ ಸರ್ಕಾರದಿಂದ ಹೊಸ ಮಾರ್ಗಸೂಚಿ‌ ಬಿಡುಗಡೆ: ಯಾವ ಝೋನ್‌ನಲ್ಲಿ ಏನಿರುತ್ತೆ? ಏನಿರಲ್ಲ?

spot_img
- Advertisement -
- Advertisement -

ದೇಶವ್ಯಾಪಿ ಲಾಕ್‌ಡೌನ್‌ ಅನ್ನು ಮೇ.04ರಿಂದ ಮೇ.17ರ ವರೆಗೆ ಕೇಂದ್ರ ಸರ್ಕಾರ ವಿಸ್ತರಿಸಿದೆ. ಆದರೆ, ಮೂರನೇ ಅವಧಿಯ ಈ ದಿಗ್ಬಂಧನ ಸೀಮಿತವಾಗಿರುತ್ತದೆ.

ಕೆಂಪು, ಕಿತ್ತಳೆ ಮತ್ತು ಹಸಿರು ವಲಯಗಳು ಎಂದು ವರ್ಗೀಕರಿಸಲಾಗಿರುವ ಜಿಲ್ಲೆಗಳಲ್ಲಿ ಹಲವು ಚಟುವಟಿಕೆಗಳಿಗೆ ಅವಕಾಶ ದೊರೆಯಲಿದೆ ಎಂದು ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಿತ್ತು. ಇದರ ಬೆನ್ನಲ್ಲೇ ಇದೀಗ ಬಿಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರವೂ ಸಹ ಕೆಲವಂದಿಷ್ಟು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಕಂಟೇನ್ಮಂಟ್ ಝೋನ್ ಹೊರತು ಪಡಿಸಿ ಇತರ ಕಡೆಗಳಲ್ಲಿ ಕೇಂದ್ರ ಸರ್ಕಾರ ಅನುಮತಿ ನೀಡಿರುವ ಜಿಲ್ಲೆಗಳಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ಆರಂಭಿಸಲು ರಾಜ್ಯ ಸರ್ಕಾರದ ಮುಂದಾಗಿದೆ. ಎಲ್ಲ ವಲಯಗಳಲ್ಲಿಯೂ ನಿಷೇಧಾಜ್ಞೆ ಜಾರಿ ಇರಲಿದ್ದು, ರಾತ್ರಿ 7ರಿಂದ ಬೆಳಗ್ಗೆ 7ರವರೆಗೆ ಓಡಾಟ ನಿಷೇಧ ಇರಲಿದೆ. ಒಂದು ವೇಳೆ ಅನಗತ್ಯ ವಿಚಾರಕ್ಕೆ ಹೊರಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಸರ್ಕಾರ ಖಡಕ್ ಆಗಿ ತಿಳಿಸಿದೆ.

ಇಲ್ಲಿದೆ ನೋಡಿ ವಲಯವಾರು ಮಾಹಿತಿ..!

  • ವಿಮಾನ ಹಾರಾಟ ಇರಲ್ಲ, ರೈಲುಗಳ ಇಲ್ಲ
  • ಅಂತಾರಾಜ್ಯ ಬಸ್ ಇರಲ್ಲ, ಮೆಟ್ರೋ ಬಂದ್
  • ಶಾಲಾ-ಕಾಲೇಜು, ಶಿಕ್ಷಣ ಸಂಸ್ಥೆಗಳು ಬಂದ್
  • ಸಿನಿಮಾ ಹಾಲ್, ಶಾಪಿಂಗ್ ಮಾಲ್ ಇರಲ್ಲ
  • ಜಿಮ್ ಗಳು, ಸ್ವಿಮ್ಮಿಂಗ್ ಪೂಲ್ ಗಳು ಇಲ್ಲ
  • ಪಾರ್ಕ್ ಗಳು ಮತ್ತು ಥಿಯೇಟರ್ಸ್ ಬಂದ್
  • ಹೋಟೆಲ್, ಬಾರ್ & ರೆಸ್ಟೋರೆಂಟ್ ಇಲ್ಲ
  • ಆಡಿಟೋರಿಯಂ, ಪಾರ್ಟಿ ಹಾಲ್ಸ್ ಬಂದ್
  • ಸಾಮಾಜಿಕ, ರಾಜಕೀಯ ಸಭೆಗೆ ನಿಷೇಧ
  • ಸಾಂಸ್ಕೃತಿಕ, ಧಾರ್ಮಿಕ ಕಾರ್ಯ ರದ್ದು
  • ಯಾವುದೇ ಸಭೆ, ಸಮಾರಂಭಗಳು ಇರಲ್ಲ
  • ಎಲ್ಲ ಧಾರ್ಮಿಕ ಸ್ಥಳಗಳು ಬಂದ್ ಆಗಿರುತ್ತೆ
  • ಇದು ಎಲ್ಲಾ ಝೋನ್ ಗಳಲ್ಲಿಯೂ ಅನ್ವಯ
  1. ಕಿತ್ತಳೆ ವಲಯಕ್ಕೆ ಏನೆಲ್ಲಾ ರಿಲೀಫ್..!
  • ಕಿತ್ತಳೆ ವಲಯದಲ್ಲಿ ಅಂತರ ಜಿಲ್ಲೆ ಬಸ್ ಇಲ್ಲ
  • ಟ್ಯಾಕ್ಸಿ ಮತ್ತು ಕ್ಯಾಬ್ ಗಳಲ್ಲಿ ಚಾಲಕ, ಇಬ್ಬರು
  • ನಿಗದಿತ ಉದ್ದೇಶಕ್ಕಾಗಿ ಅಂತರ ಜಿಲ್ಲೆ ಸಂಚಾರ
  1. ಗ್ರೀನ್ ಝೋನ್ ಗೆ ಬಿಗ್ ರಿಲೀಫ್..
  • ಗ್ರೀನ್ ಝೋನ್ ಗಳಲ್ಲಿ ಬಸ್ ಗಳ ಸಂಚಾರ (ಶೇಕಡ50ರಷ್ಟು ಬಸ್ ಪ್ರಯಾಣಿಕರಿಗೆ ಅಸ್ತು)
  • ಎಲ್ಲಾ ರೀತಿ ಅಂಗಡಿ ಮುಂಗಟ್ಟಗಳು ಓಪನ್
  • ಆಟೋಗಳ ಸಂಚಾರಕ್ಕೂ ಅನುಮತಿ ಇರುತ್ತೆ
  • ಬೈಕು, ಕಾರು, ಟ್ಯಾಕ್ಸಿ, ಕ್ಯಾಬ್ ಓಡಾಡಬಹುದು
  • ಇದು ಹಸಿರು ವಲಯದ ಜಿಲ್ಲೆಗಳಿಗೆ ಅನ್ವಯ
  1. ರೆಡ್ ಝೋನ್ ಕತೆ ಏನು?
  • ರೆಡ್ ಝೋನ್ ಗಳಲ್ಲಿ ಲಾಕ್ ಡೌನ್ ಟೈಟ್
  • ಬಸ್ ಇಲ್ಲ.. ಮೆಟ್ರೋ ರೈಲುಗಳು ಓಡಾಡಲ್ಲ
  • ಸೈಕಲು ರಿಕ್ಷಾ ಹಾಗೂ ಆಟೋ ರಿಕ್ಷಾ ಬಂದ್
  • ಟ್ಯಾಕ್ಸಿಗಳು ಹಾಗೂ ಕ್ಯಾಬ್ ಗಳಿಗೂ ನಿಷೇಧ
  • ಅಂತರ ಜಿಲ್ಲೆಗಳ ಬಸ್ ಓಡಾಟವೂ ಬಂದ್
  • ಕ್ಷೌರಿಕರ ಅಂಗಡಿ, ಸಲೂನ್ & ಸ್ಪಾ ಇರಲ್ಲ
  • ಸುಮ್ಮನೆ ಅಡ್ಡಾಡುವರಿಗೆಲ್ಲಾ ಹಾಕ್ತಾರೆ ಕೇಸ್
  • ರೆಡ್ ಝೋನ್ ಗಳಲ್ಲಿ ಜನ ಓಡಾಡಬಹುದಾ?
  • ನಿಗದಿತ ಕೆಲಸಕ್ಕೆ ಮಾತ್ರ ಓಡಾಡಲು ಸಮ್ಮತಿ
  • ಅಗತ್ಯ ವಸ್ತುಗಳ ಜನರ ಓಡಾಡಕ್ಕೆ ಅವಕಾಶ
  • ಕೆಲಸ ಕಾರ್ಯಗಳಿಗೆ ಹೋಗುವವರಿಗೆ ಅಸ್ತು
  • ಐಡಿ ಕಾರ್ಡ್ ಗಳು, ಪಾಸ್ ಇದ್ದವರಿಗೆ ಅಸ್ತು
  • ರೆಡ್ ಝೋನ್ – ಬೈಕಲ್ಲಿ ಒಬ್ಬರಿಗೆ ಅವಕಾಶ
  • ರೆಡ್ ಝೋನ್ – ಕಾರಲ್ಲಿ ಚಾಲಕ & ಇಬ್ಬರು

- Advertisement -
spot_img

Latest News

error: Content is protected !!