- Advertisement -
- Advertisement -
ಗೇರುಕಟ್ಟೆ: ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಪೆಲತ್ತಳಿಕೆ ಎಂಬಲ್ಲಿ ಸತ್ಯ ಶ್ರೀ ಯವರ ಮನೆಯ ಪಕ್ಕದ ಅಡಿಕೆ ತೋಟದಲ್ಲಿ ಬೃಹತ್ ಆಕಾರದ ಹೆಬ್ಬಾವು ಪತ್ತೆಯಾಗಿದೆ.
ಸುಮಾರು 10 ಅಡಿಗಳಷ್ಟು ಉದ್ದದ ಹೆಬ್ಬಾವು ಒಂದು ಮನೆಯ ನಾಯಿಯನ್ನು ಹಿಡಿಯಲು ಯತ್ನಿಸಿದಾಗ ಮನೆಯವರಿಗೆ ಗೊತ್ತಾಗಿದೆ.
ತಕ್ಷಣ ಸ್ಥಳೀಯ ಕಜೆ ಹೊಸ ಮನೆ ರವಿ ಪೂಜಾರಿಯರಿಗೆ ಪೋನ್ ಕರೆ ಮಾಡಿದರು.ಪೋನ್ ಕರೆಗೆ ತಕ್ಷಣ ಸ್ಪಂದಿಸಿದ ರವಿ ಪೂಜಾರಿ ಸ್ಥಳಕ್ಕೆ ಭೇಟಿ ನೀಡಿ ಹೆಬ್ಬಾವು ಎಂದು ಖಚಿತ ಪಡಿಸಿದರು. ಹಾಗೂ ತುಂಬಾ ನಾಜೂಕಾಗಿ ಹಿಡಿದು ಹತ್ತಿರದ ಎರುಕಡಪ್ಪು ಸೋಮಾವತಿ ನದಿಯ ದಂಡೆಯ ನೀರಿನಲ್ಲಿ ಬಿಡಲಾಯಿತು.
- Advertisement -