Thursday, March 28, 2024
Homeಉದ್ಯಮ650 ಕೋಟಿಗೂ ಅಧಿಕ ಹೂಡಿಕೆ ಪ್ರಕರಣ "ಕಣ್ವ ಗ್ರೂಪ್‌ನ ಆಸ್ತಿ ಮುಟ್ಟುಗೋಲು"

650 ಕೋಟಿಗೂ ಅಧಿಕ ಹೂಡಿಕೆ ಪ್ರಕರಣ “ಕಣ್ವ ಗ್ರೂಪ್‌ನ ಆಸ್ತಿ ಮುಟ್ಟುಗೋಲು”

spot_img
- Advertisement -
- Advertisement -

ಬೆಂಗಳೂರು: ಕಣ್ವ ಗ್ರೂಪ್‌ನಲ್ಲಿ 650 ಕೋಟಿಗೂ ಅಧಿಕ ಹೂಡಿಕೆ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಕಣ್ವ ಗ್ರೂಪ್‌ನ ಎಂಡಿ ನಂಜುಂಡಯ್ಯ ಹಾಗೂ ಇತರ ನಿರ್ದೇಶಕರ ಹೆಸರಿನಲ್ಲಿದ್ದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.

ಕಣ್ವ ಗ್ರೂಪ್‌ಗೆ ಸೇರಿದ 255.17 ಕೋಟಿ ರೂ. ಆಸ್ತಿಯನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದೆ.ಅಧಿಕ ಬಡ್ಡಿ ನೀಡುವುದಾಗಿ 650 ಕೋಟಿಗೂ ಅಧಿಕ ಹಣವನ್ನು ಹೂಡಿಕೆ ಮಾಡಿಸಿಕೊಂಡಿದ್ದ ಕಣ್ವ ಗ್ರೂಪ್ ಬಡ್ಡಿ ನೀಡಲು ವಿಫಲವಾಗಿತ್ತು. ಈ ಕುರಿತು ಮೊದಲು ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಯಿತು. ಜಾರಿ ನಿರ್ದೇಶನಾಲಯ ಈ ಕುರಿತು ತನಿಖೆ ಕೈಗೊಂಡ ನಂತರ ಈಗ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

- Advertisement -
spot_img

Latest News

error: Content is protected !!