Sunday, June 7, 2026
Homeಅಪರಾಧಕಲ್ಯಾಣ ಮಂಟಪಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ; ಆರೋಪಿ ಪೋಲಿಸರ ವಶಕ್ಕೆ

ಕಲ್ಯಾಣ ಮಂಟಪಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ; ಆರೋಪಿ ಪೋಲಿಸರ ವಶಕ್ಕೆ

- Advertisement -
- Advertisement -

ಆರೋಪಿಯೋರ್ವ ಕಲ್ಯಾಣ ಮಂಟಪಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದು, ಇದೀಗ ಆತನನ್ನು ದಾವಣಗೆರೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿಯನ್ನು ದಾವಣಗೆರೆ ನಗರದ ಶಾಂತಿ ನಗರದ ನಿವಾಸಿ ಕಿರಣ್ (26)ಎಂದು ಗುರತಿಸಲಾಗಿದೆ.

ಆರೋಪಿ ಕಿರಣ್ ನಿಂದ 74 ಸಾವಿರ ರೂಪಾಯಿ ಮೌಲ್ಯದ 13.25 ಗ್ರಾಂ ತೂಕದ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ. ವಶಕ್ಕೆ ಪಡೆಯಲಾಗಿರುವ ಚಿನ್ನವು ದಾವಣಗೆರೆ ನಗರದ ಸರಸ್ವತಿ ಬಡಾವಣೆಯ ಚಿದಾನಂದಗೌಡ ಎಂಬುವರ ಪತ್ನಿಗೆ ಸೇರಿದ್ದು ಎನ್ನಲಾಗಿದೆ.

ಈತನು ಕಲ್ಯಾಣ ಮಂಟಪಕ್ಕೆ ನಕಲಿ ಕೀ ಬಳಸಿ ಪ್ರವೇಶ ಮಾಡಿದ್ದು ಸಿಸಿ ಕ್ಯಾಮರಾದಲ್ಲಿ ದಾಖಲಾಗಿತ್ತು. ಇದೇ ರೀತಿ ಕಳೆದ ಎರಡು ಎರಡು ವರ್ಷಗಳಲ್ಲಿ ಮೂರು ಪೊಲೀಸ್ ಠಾಣೆ ವ್ಯಾಪ್ತಿಯ ಕಲ್ಯಾಣ ಮಂಟಪದಲ್ಲಿ ಕಳ್ಳತನ ಮಾಡಿದ್ದ. ಈ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದ್ದು, ಆರೋಪಿಯನ್ನ ಬಂಧಿಸಿದ ಪೊಲೀಸರು, ಚಿನ್ನದ ಆಭರಣವನ್ನು ವಾರಸುದಾರರಿಗೆ ನೀಡಿದ್ದಾರೆ.

- Advertisement -

Latest News

error: Content is protected !!