Thursday, May 2, 2024
HomeWorldಅಂಬಾನಿ ಪುತ್ರನ ಮದುವೆ ನಿಮಿತ್ತ ಜಾಮ್‌ನಗರ ವಿಮಾನ ನಿಲ್ದಾಣಕ್ಕೆ ಅಂತಾರಾಷ್ಟ್ರೀಯ ಸ್ಥಾನಮಾನ

ಅಂಬಾನಿ ಪುತ್ರನ ಮದುವೆ ನಿಮಿತ್ತ ಜಾಮ್‌ನಗರ ವಿಮಾನ ನಿಲ್ದಾಣಕ್ಕೆ ಅಂತಾರಾಷ್ಟ್ರೀಯ ಸ್ಥಾನಮಾನ

spot_img
- Advertisement -
- Advertisement -

ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ಪುತ್ರನ ವಿವಾಹ ಪೂರ್ವ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 10 ದಿನಗಳ ಕಾಲ ಗುಜರಾತ್‌ನ ಜಾಮ್‌ನಗರ ವಿಮಾನ ನಿಲ್ದಾಣಕ್ಕೆ ಅಂತಾರಾಷ್ಟ್ರೀಯ ಸ್ಥಾನಮಾನ ನೀಡಿರುವುದು ವರದಿಯಾಗಿದೆ.

ದಿ ವೈರ್ ವರದಿಯ ಪ್ರಕಾರ, ಪಾಕಿಸ್ತಾನದ ಗಡಿಯ ಸಮೀಪದಲ್ಲಿರುವ ಜಾಮ್‌ನಗರ ಪಟ್ಟಣದ ಭಾರತೀಯ ವಾಯುಪಡೆಯ ಸೂಕ್ಷ್ಮ ರಕ್ಷಣಾ ವಿಮಾನ ನಿಲ್ದಾಣಕ್ಕೆ ಫೆಬ್ರವರಿ 25 ರಿಂದ ಮಾರ್ಚ್ 5 ರವರೆಗೆ ಅಂತಾರಾಷ್ಟ್ರೀಯ ಸ್ಥಾನಮಾನ ನೀಡಲಾಗಿದೆ. ಇದರಿಂದ ಅಂಬಾನಿ ಮಗನ ಮದುವೆ ಸಂಬಂಧಿತ ಕಾರ್ಯಕ್ರಮಗಳಿಗೆ ಆಗಮಿಸುವವರು ಈ ವಿಮಾನ ನಿಲ್ದಾಣಕ್ಕೆ ಬಂದಿಳಿಯಬಹುದು. ವಿಮಾನ ನಿಲ್ದಾಣದ ಅಧಿಕಾರಿಗಳ ಪ್ರಕಾರ, ಫೆಬ್ರವರಿ 28 ರಿಂದ ಮಾರ್ಚ್ 4ರ ನಡುವೆ, ಜಾಮ್‌ನಗರ ವಿಮಾನ ನಿಲ್ದಾಣವು ಕನಿಷ್ಠ 150 ವಿಮಾನಗಳನ್ನು ಸ್ವೀಕರಿಸುವ ನಿರೀಕ್ಷೆಯಿದೆ. ಇವುಗಳಲ್ಲಿ 50 ವಿದೇಶಿ ಸ್ಥಳಗಳಿಂದ ನೇರವಾಗಿ ವಿಮಾನಗಳು ಆಗಮಿಸಲಿದೆ. ಐದು ದಿನಗಳಲ್ಲಿ ವಿಮಾನ ನಿಲ್ದಾಣದ ಮೂಲಕ 300ಕ್ಕೂ ಹೆಚ್ಚು ವಿಮಾನಗಳು ಹಾರಾಟ ನಡೆಸುವ ಸಾಧ್ಯತೆಯಿದೆ ಎಂದು ಜಾಮ್‌ನಗರದ ವಿಮಾನ ನಿಲ್ದಾಣದ ನಿರ್ದೇಶಕ ಡಿ.ಕೆ. ಸಿಂಗ್ ತಿಳಿಸಿರುವುದಾಗಿ ವರದಿ ಮಾಡಿದೆ.

ಅನಂತ್ ಅಂಬಾನಿಯ ವಿವಾಹ ಕಾರ್ಯಕ್ರಮದಲ್ಲಿ ಮುಂಬೈ, ದೆಹಲಿ ಸೇರಿದಂತೆ ದೇಶ ವಿದೇಶಗಳಿಂದ ಸುಮಾರು 2 ಸಾವಿರ ಅತಿಥಿಗಳು ಆಗಮಿಸುವ ನಿರೀಕ್ಷೆಯಿದೆ. ಇವರೆಲ್ಲೂ ಜಾಮ್‌ನಗರ ವಿಮಾನ ನಿಲ್ದಾಣವನ್ನೇ ಆಶ್ರಯಿಸಲಿದ್ದಾರೆ. ಇದರಿಂದ ವಿಮಾನ ನಿಲ್ದಾಣದ ಮೇಲಿನ ಒತ್ತಡ ಹಲವು ಪಟ್ಟು ಹೆಚ್ಚಾಗಿಲಿದೆ. ಪ್ರಸ್ತುತ ವಿಮಾನ ನಿಲ್ಧಾಣ ಸರಾಸರಿ ಮೂರು ನಿಗದಿತ ಮತ್ತು ಐದು ನಿಗದಿತವಲ್ಲದ ವಿಮಾನಗಳ ಪ್ರತಿದಿನ ಸ್ವೀಕರಿಸುತ್ತಿದೆ ಎಂದು ವರದಿ ತಿಳಿಸಿದೆ.

ಅಂಬಾನಿ ಮಗನ ಮದುವೆ ಹಿನ್ನೆಲೆ ಭಾರತೀಯ ವಾಯುಪಡೆ ತನ್ನ ಸೂಕ್ಷ್ಮ ತಾಂತ್ರಿಕ ಪ್ರದೇಶಕ್ಕೆ ಖಾಸಗಿ ವಿಮಾನಗಳನ್ನು ಅನುಮತಿಸಿದೆ. ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಅತಿಥಿಗಳನ್ನು ಸ್ವೀಕರಿಸಲು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ಗಾತ್ರವನ್ನು ವಿಸ್ತರಿಸಿದೆ. ಜಾಮ್‌ನಗರ ವಿಮಾನ ನಿಲ್ದಾಣದಲ್ಲಿ ಪ್ರಸ್ತುತ ಇರುವ ಪ್ರಯಾಣಿಕ ಕಟ್ಟಡ 475 ಚದರ ಕಿ.ಮೀ ನಿಂದ 900 ಚದರ ಮೀಟರ್‌ ವರೆಗೆ ಗಾತ್ರವನ್ನು ಹೊಂದಿದೆ. ಇದು ಕನಿಷ್ಠ 180 ಮತ್ತು ಗರಿಷ್ಠ ಸುಮಾರು 360 ಪ್ರಯಾಣಿಕರನ್ನು ಸ್ವೀಕರಿಸುವ ಸಾಮಾರ್ಥ್ಯ ಹೊಂದಿದೆ. “ಈಗಿರುವ 16 ಮಂದಿಯೊಂದಿಗೆ ಮೂವತ್ತೈದು ಗೃಹರಕ್ಷಕ ಸಿಬ್ಬಂದಿಯನ್ನು ವಿಮಾನ ನಿಲ್ಧಾನದಲ್ಲಿ ನಿಯೋಜಿಸಲಾಗಿದೆ. ಬಿಜೆಪಿ ನೇತೃತ್ವದ ಗುಜರಾತ್ ಸರ್ಕಾರ ಭದ್ರತಾ ಸಿಬ್ಬಂದಿಯ ನಿಯೋಜನೆಯನ್ನು 35 ರಿಂದ 70ಕ್ಕೆ ದ್ವಿಗುಣಗೊಳಿಸಿದೆ. ಗ್ರೌಂಡ್ ಹ್ಯಾಂಡ್ಲಿಂಗ್ ಏಜೆನ್ಸಿಗಳು ತಮ್ಮ ಸಿಬ್ಬಂದಿಯ ಸಂಖ್ಯೆಯನ್ನು 65ರಿಂದ 125ಕ್ಕೆ ಹೆಚ್ಚಿಸಿದ್ದಾರೆ” ಎಂದು ದಿ ಹಿಂದೂ ಒತ್ತಿ ಹೇಳಿದೆ.

ಡಿಸೆಂಬರ್ 29 ರಂದು ರಾಜಸ್ಥಾನದ ದೇವಸ್ಥಾನದಲ್ಲಿ ಅಂಬಾನಿ ಪುತ್ರನ ನಿಶ್ಚಿತಾರ್ಥ ನಡೆದೆ. ಜುಲೈ 12, 2024ರಂದು ವಿವಾಹ ನಡೆಲಿದೆ ಎಂದು ವರದಿಗಳು ತಿಳಿಸಿವೆ.

- Advertisement -
spot_img

Latest News

error: Content is protected !!