Monday, June 8, 2026
Homeಚಿಕ್ಕಮಗಳೂರುಬೆಂಗಳೂರಿನ ಧರ್ಮಸ್ಥಳಕ್ಕೆ ಬರುತ್ತಿದ್ದ ಯಾತ್ರಿಕ ಕೊಟ್ಟಿಗೆಹಾರದಲ್ಲಿ ಶೌಚಾಲಯದಲ್ಲಿ ಹೃದಯಾಘಾತದಿಂದ ಸಾವು

ಬೆಂಗಳೂರಿನ ಧರ್ಮಸ್ಥಳಕ್ಕೆ ಬರುತ್ತಿದ್ದ ಯಾತ್ರಿಕ ಕೊಟ್ಟಿಗೆಹಾರದಲ್ಲಿ ಶೌಚಾಲಯದಲ್ಲಿ ಹೃದಯಾಘಾತದಿಂದ ಸಾವು

- Advertisement -
- Advertisement -

ಕೊಟ್ಟಿಗೆಹಾರ; ಬೆಂಗಳೂರಿನ ಧರ್ಮಸ್ಥಳಕ್ಕೆ ಬರುತ್ತಿದ್ದ ಯಾತ್ರಿಕರೊಬ್ಬರು ಕೊಟ್ಟಿಗೆಹಾರದಲ್ಲಿ ಶೌಚಾಲಯದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ಬೆಂಗಳೂರು ನಿವಾಸಿ ಮಧುಸೂಧನ್ (52) ಮೃತ ದುರ್ದೈವಿ.

ಬೆಂಗಳೂರಿನಿಂದ ಧರ್ಮಸ್ಥಳಕ್ಕೆ 12 ಮಂದಿ ಯಾತ್ರಿಗಳ ತಂಡ ಟಿಟಿ ವಾಹನದಲ್ಲಿ ಸಾಗುತ್ತಿತ್ತು, ಕೊಟ್ಟಿಗೆಹಾರದಲ್ಲಿ ಟಿಟಿ ನಿಲ್ಲಿಸಿದ ವೇಳೆ ಮಧುಸೂದನ್ ಅಲ್ಲಿ ಶೌಚಾಲಯಕ್ಕೆ ತೆರಳಿದ್ದಾರೆ. ಅಲ್ಲಿ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ. ಇನ್ನು ಕೂಡಲೇ ಸಮಾಜ ಸೇವಕ ಆರೀಫ್ ಮಧುಸೂದನ್ ಅವರನ್ನು ಅಂಬುಲೆನ್ಸ್ ನಲ್ಲಿ ಬಣಕಲ್‌ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಷ್ಟರಲ್ಲಿ ಮಧುಸೂದನ್ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.   ಬಣಕಲ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!