Sunday, April 28, 2024
Homeಕರಾವಳಿಖ್ಯಾತ ಕಾದಂಬರಿಕಾರ, ಶಿಕ್ಷಣತಜ್ಞ  ಕೆ ಟಿ ಗಟ್ಟಿ ವಿಧಿವಶ

ಖ್ಯಾತ ಕಾದಂಬರಿಕಾರ, ಶಿಕ್ಷಣತಜ್ಞ  ಕೆ ಟಿ ಗಟ್ಟಿ ವಿಧಿವಶ

spot_img
- Advertisement -
- Advertisement -

ಕಾಸರಗೋಡು; ಖ್ಯಾತ ಕಾದಂಬರಿಕಾರ, ಶಿಕ್ಷಣತಜ್ಞ, ಭಾಷಾಜ್ಞ  ಕೆ ಟಿ ಗಟ್ಟಿ ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಅವರು ಇಂದು ನಿಧನ ಹೊಂದಿದ್ದಾರೆ.

ಕೆಟಿ ಗಟ್ಟಿಯವರು 1938 ಜುಲೈ 22 ರಂದು ಕಾಸರಗೋಡು ಸಮೀಪದ ಕೂಡ್ಲುವಿನಲ್ಲಿ ಜನಿಸಿದರು. ತಂದೆ ಧೂಮಪ್ಪ ಗಟ್ಟಿಯವರು ಕೃಷಿಕರೂ, ಯಕ್ಷಗಾನದ ಅಭಿಮಾನಿಗಳೂ ಕೂಡ. ಇವರ ತಾಯಿ ಪರಮೇಶ್ವರಿ ತುಳು-ಮಲಯಾಳಂ ಪಾಡ್ದನ ಹಾಡುಗಳನ್ನು ಹಾಡುತ್ತಿದ್ದರು.

ಶಿಕ್ಷಣ ತಜ್ಞ, ಕಾದಂಬರಿ ಲೋಕದ ದಿಗ್ಗಜ, ಭಾಷಾ ತಜ್ಞ ಕೆಟಿ ಗಟ್ಟಿ ಎಂದೇ ಖ್ಯಾತರಾಗಿರುವ ಕೂಡ್ಲು ತಿಮ್ಮಪ್ಪ ಗಟ್ಟಿಯವರು ಇಂದು (ಫೆಬ್ರವರಿ 19, ಸೋಮವಾರ) ಪತ್ನಿ, ನಿವೃತ್ತ ಶಿಕ್ಷಕಿ ಯಶೋದಾ, ಪುತ್ರ ನಿಟ್ಟೆ ವಿವಿಯ ಭೌತಶಾಸ್ತ್ರ ಪ್ರಾಧ್ಯಾಪಕ ಸತ್ಯಜಿತ್, ಪುತ್ರಿಯರಾದ ಅಮೆರಿಕದ ಪರಿಸರ ವಿಜ್ಞಾನಿ ಪ್ರಿಯದರ್ಶಿನಿ, ಆಸ್ಟ್ರಿಯಾದಲ್ಲಿ ಮಾನವಶಾಸ್ತ್ರಜ್ಞೆಯಾಗಿರುವ ಆಗಿರುವ ಚಿತ್ ಪ್ರಭಾರನ್ನು ಅಗಲಿದ್ದಾರೆ.

ಖಾಸಗಿಯಾಗಿ ಕೇರಳ ವಿಶ್ವವಿದ್ಯಾಲಯದಿಂದ ಇಂಗ್ಲಿಷ್‌ ಸ್ನಾತಕೋತ್ತರ ಪದವಿ ಪಡೆದ ಗಟ್ಟಿಯವರು, 1968ರಲ್ಲಿ ಮಣಿಪಾಲದ ಎಂ.ಐ.ಟಿ. ಸಂಸ್ಥೆಯಲ್ಲಿ ಆರು ವರ್ಷಗಳ ಕಾಲ ಇಂಗ್ಲಿಷ್‌ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದರು. ನಂತರ ಒಂದು ವರ್ಷ ಉಡುಪಿಯ ಟಿ.ಎಂ.ಎ.ಪೈ ಶಿಕ್ಷಣ ಮಹಾವಿದ್ಯಾಲಯದಲ್ಲೂ ಅಧ್ಯಾಪಕರಾಗಿ ಸೇವೆಸಲ್ಲಿಸಿದರು. ಭಾರತ ಸರಕಾರದಿಂದ ಪ್ರಾಧ್ಯಾಪಕರಾಗಿ ನಿಯುಕ್ತರಾಗಿ ಇಥಿಯೋಪಿಯಾದಲ್ಲಿರುವಾಗಲೇ ಲಂಡನ್ನಿನ ಟ್ರಿನಿಟಿ ಕಾಲೇಜಿನಿಂದ ಇಂಗ್ಲಿಷ್‌ ಕಲಿಕೆಯಲ್ಲಿ ಡಿಪ್ಲೊಮ ಮತ್ತು ಆಕ್ಸ್‌ಫರ್ಡಿನ ಕಾಲೇಜ್‌ ಆಫ್‌ ಪ್ರಿಸೆಪ್ಟರ್ಸ್‌ನಿಂದ ಪಡೆದ ಡಿಪ್ಲೊಮಾ ಪಡೆದರು.

1957ರಿಂದಲೇ ಸಾಹಿತ್ಯ ಕೃಷಿ ಪ್ರಾರಂಭಿಸಿದ ಗಟ್ಟಿಯವರಿಗೆ ಹೆತ್ತವರೇ ಪ್ರೇರಣೆಯಾಗಿದ್ದರು. ಯಕ್ಷಗಾನ ಪ್ರಿಯರಾದ ತಂದೆ ಧೂಮಪ್ಪನವರು ಕೂಡ್ಲು ಯಕ್ಷಗಾನ ನಾಟಕ ಮಂಡಲಿ (ಮಂಗಳೂರು)ಯೊಡನೆ ಊರೂರು ಸುತ್ತುತ್ತಾ, ಮನೆಗೆ ತರುತ್ತಿದ್ದ ಪುಸ್ತಕಗಳನ್ನು ಕೆಟಿ ಗಟ್ಟಿಯವರು ಓದುತ್ತಿದ್ದರು.

1978ರಲ್ಲಿ ಗಟ್ಟಿಯವರು ಬರೆದ ‘ಸಾಫಲ್ಯ’ ಕಾದಂಬರಿಯೂ ಸೇರಿ 2004ರ ವರೆಗೆ ಸುಮಾರು 14 ಕಾದಂಬರಿಗಳು ಸುಧಾ ವಾರಪತ್ರಿಕೆಯೊಂದರಲ್ಲಿಯೇ ಧಾರಾವಾಹಿಯಾಗಿ ಪ್ರಕಟಗೊಂಡಿವೆ. ಒಂದೇ ಪತ್ರಿಕೆಯಲ್ಲಿ ಇಷ್ಟು ಕಾದಂಬರಿಗಳನ್ನು ಪ್ರಕಟಿಸಿದ್ದು ಲೇಖಕನಾಗಿ ಕೆಟಿ ಗಟ್ಟಿಯವರ ಸಾಧನೆ.

ಉಜಿರೆಯ ಬಳಿ ಜಮೀನು ಖರೀದಿಸಿ ‘ವನಸಿರಿ’ ಯಲ್ಲಿ ಕೃಷಿ, ಸಾಹಿತ್ಯ ಕೃಷಿ ಎರಡರಲ್ಲೂ ತೊಡಗಿಸಿಕೊಂಡರು. ‘ಮನುಷ್ಯನ ವಾಸನೆ ಮತ್ತು ಇತರ ಕಥೆಗಳು’, ‘ನೀಲಿ ಗುಲಾಬಿ ಮತ್ತು ಇತರ ಕಥೆಗಳು’, ‘ಭೂಗತ ಮತ್ತು ಇತರ ಕಥೆಗಳು’,‘ವಿಶ್ವ ಸುಂದರಿ ಮತ್ತು ಇತರ ಕಥೆಗಳು’ ಹಾಗೂ ‘ಪ್ರೀತಿ ಎಂಬ ಮಾಯೆ ಮತ್ತು ಇತರ ಕಥೆಗಳು’ ಎಂಬ ಸಂಕಲನಗಳನ್ನು ಪ್ರಕಟಿಸಿದರು.

ಸಾಹಿತ್ಯ ಕೃಷಿಗಾಗಿಯೇ ತಮ್ಮನ್ನು ತಾವು ಮುಡಿಪಾಗಿಟ್ಟ ಕೆ ಟಿ ಗಟ್ಟಿ ಅಗಲಿತೆ ಸಾಹಿತ್ಯಲೋಕಕ್ಕೆ ಭರಿಸಲಾಗದ ನಷ್ಟ. ಮೃತರು ಪತ್ನಿ, ನಿವೃತ್ತ ಶಿಕ್ಷಕಿ ಯಶೋದಾ, ಪುತ್ರ ನಿಟ್ಟೆ ವಿವಿಯ ಭೌತಶಾಸ್ತ್ರ ಪ್ರಾಧ್ಯಾಪಕ ಸತ್ಯಜಿತ್, ಪುತ್ರಿಯರಾದ ಅಮೆರಿಕಾದಲ್ಲಿ ನೆಲೆಸಿರುವ ಪರಿಸರ ವಿಜ್ಞಾನಿ ಪ್ರಿಯದರ್ಶಿನಿ, ಆಸ್ಟ್ರೀಯಾದಲ್ಲಿರುವ ಮಾನವಶಾಸ್ತ್ರಜ್ಞೆಯಾಗಿರುವ ಆಗಿರುವ ಚಿತ್ ಪ್ರಭಾರನ್ನು ಅಗಲಿದ್ದಾರೆ.

- Advertisement -
spot_img

Latest News

error: Content is protected !!