Friday, June 5, 2026
Homeತಾಜಾ ಸುದ್ದಿಎಗ್ ಕರಿ ಮಾಡಿಲ್ಲ ಅಂತಾ ಸ್ನೇಹಿತನೇ ಕೊಂದ ಪಾಪಿ ಗೆಳೆಯ

ಎಗ್ ಕರಿ ಮಾಡಿಲ್ಲ ಅಂತಾ ಸ್ನೇಹಿತನೇ ಕೊಂದ ಪಾಪಿ ಗೆಳೆಯ

- Advertisement -
- Advertisement -

ಮುಂಬೈಃ ತಾನು ಕೇಳಿದ ಎಗ್ ಕರಿ ಮಾಡಿ ಕೊಟ್ಟಿಲ್ಲ ಅಂತಾ ವ್ಯಕ್ತಿಯೊಬ್ಬ ತನ್ನ ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಘಟನೆ ನಾಗಪುರ ಜಿಲ್ಲೆಯ ಮಂಕಾಪುರ ಪ್ರದೇಶದಲ್ಲಿ ನಡೆದಿದೆ.

ಬನಾರಸಿ(40) ಕೊಲೆಯಾಗಿರುವ ಸ್ನೇಹಿತ. ಬನಾರಸಿ ರಾತ್ರಿ ಊಟಕ್ಕೆ ರೂಮ್ಗೆ ಬರುವಂತೆ ಸ್ನೇಹಿತ ಗೌರವ್ ಗಾಯಕ್ವಾಡ್(38)ನನ್ನು ಕರೆಸಿಕೊಂಡಿದ್ದಾನೆ. ಇಬ್ಬರು ಕಂಠಪೂರ್ತಿ ಕುಡಿದ ನಂತರ ಗಾಯಕ್ವಾಡ್ ಮೊಟ್ಟೆ ಕರಿ ಮಾಡಿಕೊಡುವಂತೆ ಕೇಳಿದ್ದಾನೆ. ಆದರೆ ಬನರಾಸಿ ಮಾಡಿಕೊಟ್ಟಿಲ್ಲ.

ಹೀಗೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಒಂದು ಹಂತದಲ್ಲಿ ಗೌರವ್ ಬನಾರಸಿಯ ಮೇಲೆ ರಾಡ್ನಿಂದ ಹಲ್ಲೆ ಮಾಡಿದ್ದಾನೆ. ಇದರಿಂದ ಬನಾರಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮಂಕಪುರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!