Saturday, May 18, 2024
Homeಪ್ರಮುಖ-ಸುದ್ದಿಲಡಾಕ್ ನಲ್ಲಿ ಚೀನೀ ಸೈನಿಕನನ್ನು ವಶಕ್ಕೆ ಪಡೆದ ಭಾರತೀಯ ಸೇನೆ

ಲಡಾಕ್ ನಲ್ಲಿ ಚೀನೀ ಸೈನಿಕನನ್ನು ವಶಕ್ಕೆ ಪಡೆದ ಭಾರತೀಯ ಸೇನೆ

spot_img
- Advertisement -
- Advertisement -

ಲಡಾಖ್ :​ ಗಡಿಯಲ್ಲಿ ಅಕ್ರಮವಾಗಿ ಪ್ರವೇಶ ಪಡೆದಿದ್ದ ಚೀನಿ ಸೈನಿಕರೊಬ್ಬರನ್ನು ಭಾರತೀಯ ಸೇನೆ ಭಾನುವಾರ ರಾತ್ರಿ ವಶಕ್ಕೆ ಪಡೆದಿದೆ.

ಡೆಮ್ಚೋಕ್ ಭಾಗದಲ್ಲಿ ಸೆರೆ ಸಿಕ್ಕ ಚೀನಿ ಸೈನಿಕನಿಂದ ಮಿಲಿಟರಿ ದಾಖಲೆಗಳನ್ನು ವಶಕ್ಕೆ ಪಡೆದು, ಪ್ರೋಟೊಕಾಲ್ ಪ್ರಕಾರ ಆ ಸೈನಿಕನನ್ನು ಚೀನಾಕ್ಕೆ ಹಸ್ತಾಂತರಿಸುವುದಾಗಿ ಭಾರತ ತಿಳಿಸಿದೆ.

ಪ್ರಕರಣದ ಬಗ್ಗೆ ಅಧಿಕೃತ ಹೇಳಿಕೆ ನೀಡಲು ಭಾರತೀಯ ಸೇನೆ ಪ್ರಕಟಣೆ ಸಿದ್ಧಗೊಳಿಸುತ್ತಿದೆ ಎಂದು ತಿಳಿದುಬಂದಿದೆ. ಇದೇ ವೇಳೆ, ಚೀನಾದ ಈ ಸೈನಿಕ ಬೇಹುಗಾರಿಕೆಯಲ್ಲಿ ತೊಡಗಿದ್ದನೆಂಬ ಮಾತುಗಳು ಸಹ ಕೇಳಿಬಂದಿವೆ.

ಭಾರತ ಹಾಗೂ ಚೀನಾ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿರುವಾಗಲೇ ಸೈನಿಕನನ್ನು ವಶಕ್ಕೆ ಪಡೆದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅಲ್ಲದೆ ಇತ್ತೀಚೆಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಯುದ್ಧಕ್ಕೆ ತಯಾರಾಗುವಂತೆ ತಮ್ಮ ಸೇನೆಗೆ ಸೂಚಿಸಿದ ಕರಿತು ಸಹ ಮಾಹಿತಿ ಲಭ್ಯವಾಗಿತ್ತು. ಹೀಗಾಗಿ ಚೀನಿ ಸೈನಿಕ ಸೆರೆಯಾಗಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

- Advertisement -
spot_img

Latest News

error: Content is protected !!