Thursday, June 25, 2026
Homeಕರಾವಳಿಉಡುಪಿರಿಷಭ್ ಶೆಟ್ಟಿ ಹುಟ್ಟೂರು ಕೆರಾಡಿಯಲ್ಲಿ ಜೂನಿಯರ್ ಎನ್ ಟಿಆರ್ ಸುತ್ತಾಟ

ರಿಷಭ್ ಶೆಟ್ಟಿ ಹುಟ್ಟೂರು ಕೆರಾಡಿಯಲ್ಲಿ ಜೂನಿಯರ್ ಎನ್ ಟಿಆರ್ ಸುತ್ತಾಟ

- Advertisement -
- Advertisement -

ಉಡುಪಿ: ಉಡುಪಿ ಜಿಲ್ಲಾ ಪ್ರವಾಸದಲ್ಲಿರುವ ತೆಲುಗು ನಟ ಜೂನಿಯರ್ ಎನ್ ಟಿಆರ್ ಸೋಮವಾರ ಕುಂದಾಪುರ ತಾಲೂಕಿನಲ್ಲಿ ಸುತ್ತಾಟ ನಡೆಸಿದ್ದಾರೆ.

ಕುಂದಾಪುರ ತಾಲೂಕಿನ ಕೆರಾಡಿ ಗ್ರಾಮದಲ್ಲಿರುವ ಮೂಡಗಲ್ಲು ಕೇಶವನಾಥೇಶ್ವರ ಗುಹಾಂತರ ದೇವಸ್ಥಾನಕ್ಕೆ ಜೂನಿಯರ್ ಎನ್ ಟಿಆರ್ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

ಇದೇ ವೇಳೆ ಸ್ಥಳೀಯವಾಗಿ ಕೆಲವು ಸ್ಥಳಗಳಿಗೆ ಭೇಟಿ ನೀಡಿರುವ ಜೂನಿಯರ್ ಎನ್ ಟಿಆರ್ ಬೆಟ್ಟದ ತಪ್ಪಲಿನಲ್ಲಿ ಓಡಾಟ ನಡೆಸಿದ್ದಾರೆ.

ನಿರ್ದೇಶಕ ಪ್ರಶಾಂತ್ ನೀಲ್, ನಟರಾದ ರಿಷಭ್ ಶೆಟ್ಟಿ ಮತ್ತು ಪ್ರಮೋದ್ ಶೆಟ್ಟಿ ಕೂಡಾ ಈ ವೇಳೆ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.

ಇದಕ್ಕೂ ಮುನ್ನ ಜೂನಿಯರ್ ಎನ್ ಟಿಆರ್ ಪತ್ನಿ ಮತ್ತು ತಾಯಿಯ ಜೊತೆ ಉಡುಪಿ ಶ್ರೀಕೃಷ್ಣ ಮಠ ಮತ್ತು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು.

- Advertisement -

Latest News

error: Content is protected !!