Wednesday, June 24, 2026
Homeಕರಾವಳಿಉಡುಪಿಉಡುಪಿ:ರೌಡಿ ಶೀಟರ್ ಬಂಟ್ವಾಳದ ಚರಣ್ ರಾಜ್ ಗೂಂಡಾಕಾಯ್ದೆಯಡಿ ಬಂಧನ

ಉಡುಪಿ:ರೌಡಿ ಶೀಟರ್ ಬಂಟ್ವಾಳದ ಚರಣ್ ರಾಜ್ ಗೂಂಡಾಕಾಯ್ದೆಯಡಿ ಬಂಧನ

- Advertisement -
- Advertisement -

ಉಡುಪಿ: ರೌಡಿ ಶೀಟರ್ ಬಂಟ್ವಾಳದ ಚರಣ್ ರಾಜ್(29) ಎಂಬಾತನನ್ನು ಗೂಂಡಾ ಕಾಯ್ದೆಯಡಿ ಉಡುಪಿ ನಗರ ಪೊಲೀಸ್ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಟ್ವಾಳ ತಾಲೂಕಿನ ಪುದು ಗ್ರಾಮದವನಾದ ರೌಡಿ ಶೀಟರ್ ಚರಣ್ ರಾಜ್ ಸದ್ಯ ಉಡುಪಿಯಲ್ಲಿ ವಾಸವಿದ್ದ. ಈತನನ್ನು ಗೂಂಡಾ ಕಾಯ್ದೆಯಡಿ ಬಂಧಿಸಲು ಪೊಲೀಸ್‌ ಅಧೀಕ್ಷಕರು ಉಡುಪಿ ಜಿಲ್ಲೆರವರ ವರದಿಯ ಮೇರೆಗೆ ಜಿಲ್ಲಾ ದಂಡಾಧಿಕಾರಿಯವರು ಹಾಗೂ ಜಿಲ್ಲಾಧಿಕಾರಿಯವರು, ಉಡುಪಿ ಜಿಲ್ಲೆ, ಅವರು ದಿನಾಂಕ: 24-06-2026 ರಂದು ಆದೇಶ ಹೊರಡಿಸಿರುತ್ತಾರೆ.

ಈತನ ವಿರುದ್ಧ ಬಂಟ್ವಾಳ ಗ್ರಾಮಾಂತರ, ಸುರತ್ಕಲ್‌, ಮಂಗಳೂರು ಪೂರ್ವ ಹಾಗೂ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಕೊಲೆಯತ್ನ, ಹಲ್ಲೆ, ಅಕ್ರಮ ಕೂಟ, ಮಹಿಳೆಯರ ಮೇಲೆ ದೌರ್ಜನ್ಯ, ಮಾದಕ ದ್ರವ್ಯ ಸೇವನೆ, ಮಾದಕ ದ್ರವ್ಯ ಸಾಗಾಟ, ಎಸ್.ಸಿ./ಎಸ್.ಟಿ. ಕಾಯ್ದೆ ಸಹಿತ ಒಟ್ಟು 10 ಪ್ರಕರಣಗಳು ದಾಖಲಾಗಿರುತ್ತದೆ. ಅವುಗಳ ಪೈಕಿ 03 ಪ್ರಕರಣಗಳಲ್ಲಿ ಶಿಕ್ಷೆ, 02 ಪ್ರಕರಣಗಳ್ಲಿ ಖುಲಾಸೆ, 04 ಪ್ರಕರಣ ನ್ಯಾಯಾಂಗ ವಿಚಾರಣೆ ಹಾಗೂ ಉಳಿದ 01 ಪ್ರಕರಣ ತನಿಖೆಯಲ್ಲಿರುತ್ತದೆ.ಬಂಧಿತ ಆರೋಪಿಯನ್ನು ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿರಿಸಲು ಆದೇಶಿಸಲಾಗಿದೆ.

- Advertisement -

Latest News

error: Content is protected !!