Friday, June 5, 2026
Homeಉತ್ತರ ಕನ್ನಡಉತ್ತರಕನ್ನಡದಲ್ಲಿ ಗಣೇಶ ವಿಸರ್ಜನೆ ವೇಳೆ ಕಾಣಿಸಿಕೊಂಡ ಮೋದಿ...

ಉತ್ತರಕನ್ನಡದಲ್ಲಿ ಗಣೇಶ ವಿಸರ್ಜನೆ ವೇಳೆ ಕಾಣಿಸಿಕೊಂಡ ಮೋದಿ…

- Advertisement -
- Advertisement -

ಉತ್ತರಕನ್ನಡ;  ಮೊನ್ನೆ ಮೊನ್ನೆ ಮಂಗಳೂರಿಗೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಇದೀಗ ಉತ್ತರಕನ್ನಡಕ್ಕೂ ದಿಢೀರ್ ಅಂತಾ ಭೇಟಿ ಕೊಟ್ಟಿದ್ದಾರೆ. ಅದು ಕೂಡ ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ಭಾಗಿಯಾಗೋದಕ್ಕೆ.

ಅಯ್ಯೋ ಅದ್ಯಾವಾಗ ನಮ್ಗೆ ಗೊತ್ತಾಗಿ ಆಗಿಲ್ಲ ಅಲ್ವಾ… ಅಂತಾ ಮೋದಿ ಅಭಿಮಾನಿಗಳು ಮಂಡೆ ಬೆಚ್ಚ ಮಾಡ್ಬೇಡಿ. ನಿಜಾಂಶ ಬೇರೇನೇ ಇದೆ. ಇತ್ತೀಜೆಗೆ ಉತ್ತರಕನ್ನಡ ಜಿಲ್ಲೆಯ ಕುಮಟಾ ಬಸ್ ನಿಲ್ದಾಣದ ಗಣಪತಿ ವಿಸರ್ಜನೆ ವೇಳೆ ಮೋದಿಯವರ ತದ್ರೂಪದ ವ್ಯಕ್ತಿಯೊಬ್ಬರು ಭಾಗಿಯಾಗಿದ್ದರು. ಥೇಟ್ ಪ್ರಧಾನಿಗಳಂತೆಯೇ ಕಾಣುವ ಅವರನ್ನು ಒಂದು ಕ್ಷಣ ನೋಡಿದ್ರೆ ಎಲ್ಲರಿಗೂ ಶಾಕ್ ಆಗೋದಂತೂ ನಿಜ. ಅದರಲ್ಲೂ ಮೋದಿ ಅವರಂತೆಯೇ ಅವರು ಉಡುಪು ಧರಿಸಿದ್ರೆ ಇಬ್ಬರಲ್ಲಿ ನಿಜವಾದ ಮೋದಿ ಯಾರು ಎನ್ನುವಷ್ಟು ಸಾಮತ್ಯೆ ಅವರಲ್ಲಿದೆ.

ಅಂದ್ಹಾಗೆ ಇವರ ಹೆಸರು ಸದಾನಂದ ನಾಯಕ್. ಇವರನ್ನು ಸಡನ್ ಆಗಿ ನೋಡಿ ಯಾರಿಗಾದ್ರೂ ಮೋದಿ ಬಂದ್ರೆನೋ ಅಂತಾ ಅನ್ನಿಸದೇ ಇರಲ್ಲ. ಹಾವಭಾವ ಎಲ್ಲದರಲ್ಲೂ ಮೋದಿ ಅವರನ್ನೇ ಹೋಲ್ತಾರೆ.

- Advertisement -

Latest News

error: Content is protected !!